ನ್ಯೂಯಾರ್ಕ್: ಅಮೆರಿಕ ಸಂಯುಕ್ತ ಸಂಸ್ಥಾನದ ಉಪಾಧ್ಯಕ್ಷೀಯ ಚುನಾವಣೆಯ ಸ್ಪರ್ಧಿಯಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಆಯ್ಕೆಯಾಗಿದ್ದಾರೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಸಾಕಷ್ಟು ಭಾರತೀಯರು ಆಕೆಯ ಧರ್ಮದ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಆಕೆ ಹಿಂದು ಧರ್ಮದವರಾ ಎಂದು ಸರ್ಚ್ ಮಾಡಿದ್ದಾರೆ ಎನ್ನಲಾಗಿದೆ.
ಕ್ಯಾಲಿಫೋರ್ನಿಯಾದ ಸೆನೆಟರ್ ಕಮಲಾ ಅವರ ಹೆಸರನ್ನು ಉಪಾಧ್ಯಕ್ಷ ಚುನಾವಣೆಗೆ ಅವರ ಸಹ ಸ್ಪರ್ಧಿ ಜೊಯ್ ಬುಧವಾರ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ. 55 ವರ್ಷದ ಕಮಲಾ ಅವರು ಮೊದಲ ಬಾರಿಗೆ ಸೆನೆಟರ್ ಆಗಿದ್ದು, ಪಕ್ಷದಲ್ಲಿ ಅತಿ ಶೀಘ್ರವಾಗಿ ಮುನ್ನೆಲೆಗೆ ಬಂದಿದ್ದಾರೆ. ಕಮಲಾ ಅವರು ಕ್ಯಾಲಿಫೋರ್ನಿಯಾದ ಮೊದಲ ಕಪ್ಪು ವರ್ಣೀಯ ಅಟಾರ್ನಿ ಜನರಲ್ ಆಗಿದ್ದಾರೆ. ಅಷ್ಟೇ ಅಲ್ಲ, ಆ ಸ್ಥಾನಕ್ಕೇರಿದ ಮೊದಲ ಮಹಿಳೆ. ಅಮೆರಿಕ ಸೆನೆಟ್ ಗೆ ಆಯ್ಕೆಯಾದ ದಕ್ಷಿಣ ಏಷ್ಯಾ ಮೂಲದ ಮೊದಲ ಮಹಿಳೆಯಾಗಿದ್ದಾರೆ. ಈಗ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗುವ ಹಾದಿಯಲ್ಲಿದ್ದಾರೆ.
ಕಮಲಾ ಅವರು ಭಾರತೀಯ ಮೂಲ ಬೇರನ್ನು ಹೊಂದಿದ್ದಾರೆ. ಅವರ ತಾಯಿ ಶ್ಯಾಮಲಾ ಗೋಪಾಲನ್ ಚೆನ್ನೈನಲ್ಲಿ ಜನಿಸಿದವರು ನಂತರ ಅಮೆರಿಕಕ್ಕೆ ಹೋಗಿ ನೆಲೆಸಿದ್ದರು. ಕಮಲಾ ಅವರು ತಮ್ಮ ಹಲವು ಸಂದರ್ಶನಗಳಲ್ಲಿ ತಮ್ಮ ಭಾರತೀಯ ಮೂಲ, ತಾಯಿ ಶ್ಯಾಮಲಾ ಅವರ ಬಗ್ಗೆ ಹೇಳಿದ್ದಾರೆ. ಅಷ್ಟೇ ಅಲ್ಲ, ತಮ್ಮ ಅಜ್ಜ ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂದಿದ್ದಾರೆ. ಆದರೆ, ಭಾರತೀಯ ಮೂಲವೇ ಅವರಿಗೆ ಮುಳುವಾಗುವಂತಿದೆ. ಆಕೆಯ ಹೆಸರು ನಾಮ ನಿರ್ದೇಶನವಾಗುತ್ತಿದ್ದಂತೆ, ಆಕೆಯ ವಿರುದ್ಧ ಕೆಲವು ಅಮೆರಿಕನ್ನರು ಕ್ಯಾಂಪೇನಿಂಗ್ ಪ್ರಾರಂಭಿಸಿದ್ದಾರೆ.
https://twitter.com/JayTharappel/status/1293380016189841408?ref_src=twsrc%5Etfw%7Ctwcamp%5Etweetembed%7Ctwterm%5E1293380016189841408%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fis-kamala-harris-hindu-what-many-indians-searched-for-after-biden-picked-us-vice-president-candidate-2778823.html