ಅಬ್ಬಾ……ನಮ್ಮ ಸುತ್ತಲ ಪರಿಸರ ಅದೆಷ್ಟು ವಿಚಿತ್ರ ಮತ್ತು ವಿಸ್ಮಯಗಳನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿದೆ ?
ಈ ಚಿತ್ರವನ್ನೊಮ್ಮೆ ಗಮನಿಸಿ. ನೋಡಲು ಇದು ಯಾವುದೋ ಹೂವಿನಂತೆ ಕಾಣುತ್ತದೆ. ಇನ್ನೊಂದು ಕಡೆಯಿಂದ ಕಾಣುವಾಗ ಮಿಡತೆಯಂಥಾ ಯಾವುದೋ ಕೀಟ ಇರಬಹುದೇನೋ ಎನ್ನಿಸುತ್ತದೆ. ಸಾಲದ್ದಕ್ಕೆ ಚಲನೆಯೂ ಇದೆ.
ಗಿಡದಲ್ಲಿನ ಹೂವು ಗಾಳಿಗೆ ಅಲುಗಾಡಿರಬೇಕು, ಅದು ಚಲಿಸಿದಂತೆ ನಮಗೆ ಕಾಣುತ್ತಿರಬೇಕು, ಅದರ ಚಲನೆಯೇ ಭ್ರಮೆ ಎಂದುಕೊಂಡೀರಿ. ಹಾಗೆಂದುಕೊಂಡರೆ ಅದು ನಿಮ್ಮ ಭ್ರಮೆ. ಅದು ಚಲಿಸುತ್ತದೆ ಎಂಬುದೇ ಸತ್ಯ.
ಹೌದು. ಇದು ಆರ್ಕಿಡ್ ಮಂಟೀಸ್. ನಡೆದಾಡುವ ಆರ್ಕಿಡ್. ಆರ್ಕಿಡ್ ಎಲ್ಲಿಯಾದರೂ ನಡೆದಾಡಲು ಸಾಧ್ಯವೇ ಎನ್ನಬೇಡಿ. ಅಸಲಿಗೆ ಇದು ಆರ್ಕಿಡ್ ರೀತಿಯೇ ಕಾಣುವ ಮಿಡತೆ ಜಾತಿಯ ಕೀಟ. ಗಿಡದ ಎಲೆಗಳ ಮೇಲೆ ಇದನ್ನು ಕಂಡಾಗ ಆರ್ಕಿಡ್ ಹೂವಿನ ಎಸಳು, ದಳಗಳಿರಬೇಕು ಎನ್ನಿಸಿಬಿಡುತ್ತವೆ.
ಸುಂದರವಾದ ಬಣ್ಣದಿಂದ ಬಣ್ಣದಂದ ಕಂಗೊಳಿಸುವ ಇದು, ಎಲೆಗಳನ್ನೇ ತಿಂದು ಬದುಕುವ ಕೀಟ. ಅದನ್ನು ಮುಟ್ಟಿದರೆ, ಕೈಮೇಲೆ ಬಿಟ್ಟುಕೊಂಡರೆ ಆರ್ಕಿಡ್ ಅಲ್ಲ, ಕೀಟ ಎಂಬುದು ಅರಿವಿಗೆ ಬರುತ್ತದೆ. ಪಶ್ಚಿಮಘಟ್ಟದಲ್ಲಿನ ಇಂತಹ ಅಪರೂಪದ ವಿಸ್ಮಯಕಾರಿ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಶೇರ್ ಮಾಡಿದ್ದಾರೆ.