
ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಕೊರೊನಾ ಲಸಿಕೆ ಪಡೆಯಲು ಬಯಸುವವರು ಕೋವಿನ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ. ಕೋವಿಡ್ -19 ವ್ಯಾಕ್ಸಿನೇಷನ್ ನೋಂದಣಿಗೆ ಆಧಾರ್ ಕಾರ್ಡ್ ಬಳಸುವ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ.
ಕೋವಿನ್ ಪೋರ್ಟಲ್ ಲಿಂಕ್ www.cowin.gov.in ಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಇಲ್ಲಿ ಹೆಸರು ನೋಂದಾಯಿಸಲು, ರಿಜಿಸ್ಟರ್ / ಸೈನ್ ಇನ್ ಟ್ಯಾಬ್ ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ಕಾರ್ಡ್ ಇಲ್ಲದೆ ಹೆಸರು ನೋಂದಾಯಿಸಿಕೊಳ್ಳಬಹುದು. ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪಾನ್ ಕಾರ್ಡ್, ಪಾಸ್ಪೋರ್ಟ್, ಪಿಂಚಣಿ ಪಾಸ್ಬುಕ್, ಮತದಾರರ ಗುರುತಿನ ಚೀಟಿ ಸೇರಿದಂತೆ ಯಾವುದಾದ್ರೂ ದಾಖಲೆಯನ್ನು ನೀಡಬಹುದು.
ಕೈದಿಗಳಿಗೆ ಕೂಡ ಕೊರೊನಾ ಲಸಿಕೆ ಹಾಕುವ ವೇಳೆ ಆಧಾರ್ ಕಾರ್ಡ್ ಅನಿವಾರ್ಯ ಮಾಡುವಂತಿಲ್ಲ. ಕೈದಿಗಳಿಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಆಧಾರ್ ಅನಿವಾರ್ಯವೇ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ಪ್ರಶ್ನೆ ಮಾಡಿತ್ತು. ಒಂದು ವೇಳೆ ಕೈದಿಗಳು ಆಧಾರ್ ಕಾರ್ಡ್ ಮಾಡಿಸದೆ ಹೋದಲ್ಲಿ ಏನು ಮಾಡ್ತಿರೆಂದು ಪ್ರಶ್ನೆ ಮಾಡಿತ್ತು.