![child abuse case banda: बांदा, चित्रकूट और हमीरपुर में 70 से ज्यादा बच्चों का यौन शोषण करने वाले जूनियर इंजिनियर को HIV? AIIMS कर रहा जांच - irrigation department junior ...](https://static.langimg.com/thumb/msid-80209452,imgsize-73516,width-540,height-405,resizemode-75/navbharat-times.jpg)
ಉತ್ತರ ಪ್ರದೇಶದ ಬಾಂಡಾದಲ್ಲಿ ಟೆನ್ಷನ್ ಹೆಚ್ಚಾಗಿದೆ. 70 ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ನೀರಾವರಿ ಇಲಾಖೆಯ ಜೂನಿಯರ್ ಎಂಜಿನಿಯರ್ ರಾಮಭವನ್ ಗೆ ಎಚ್‌ಐವಿ ಇರುವ ಶಂಕೆ ವ್ಯಕ್ತವಾಗ್ತಿದೆ. ಎಚ್‌ಐವಿ ರೋಗಲಕ್ಷಣ ಕಂಡು ಬಂದ ಕಾರಣ ಆತನನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನಿಗೆ ಎಚ್ ಐವಿ ಕಾಣಿಸಿಕೊಂಡ ಕಾರಣ 70 ಮಕ್ಕಳ ಜೀವನ ಸಂಕಷ್ಟಕ್ಕೆ ಸಿಲುಕಿದೆ.
70 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಎಂಜಿನಿಯರ್ ಅದ್ರ ವಿಡಿಯೋ ಮಾಡಿದ್ದ. ಸಿಬಿಐ ತಂಡ ಆತನನ್ನು ಬಂಧಿಸಿತ್ತು. ಈಗ ದೆಹಲಿಯ ಏಮ್ಸ್ ಗೆ ಆತನನ್ನು ಕರೆ ತಂದಿದೆ. ದೆಹಲಿಯಲ್ಲಿ 8 ವೈದ್ಯರ ತಂಡವು ಆತನ ಪರೀಕ್ಷೆ ನಡೆಸುತ್ತಿದೆ. ಮಾನಸಿಕ, ದೈಹಿಕ ಪರೀಕ್ಷೆ ನಡೆಯುತ್ತಿದೆ.
ಕಳೆದ 10 ವರ್ಷಗಳಿಂದ ಎಂಜಿನಿಯರ್ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದು. ಅದನ್ನು ವಿಡಿಯೋ ಮಾಡಿ ಪೋರ್ನ್ ಸೈಟ್ ಗೆ ನೀಡ್ತಿದ್ದ. ಐದು ವರ್ಷದಿಂದ 16 ವರ್ಷದ ಹುಡುಗಿಯರು ಈತನ ಬಲೆಗೆ ಬಿದ್ದಿದ್ದರು. ಲೈಂಗಿಕ ದೌರ್ಜನ್ಯದಲ್ಲಿ ಭಾಗಿಯಾಗಿರುವ ವಿಷ್ಯ ಹೊರ ಬರ್ತಿದ್ದಂತೆ ಆತನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.