
ಇದೀಗ ಟ್ವಿಟರ್ನಲ್ಲಿ ವಿದ್ಯಾರ್ಥಿಯೊಬ್ಬನ ಫೋಟೋ ಹರಿದಾಡುತ್ತಿದ್ದು ಅದನ್ನ ನೋಡಿದ ಟ್ವೀಟಿಗರೆಲ್ಲ ಬಾಲ್ಯದ ದಿನಗಳನ್ನ ಮೆಲುಕು ಹಾಕಿದ್ದಾರೆ.
ಶಾಲಾ ವಿದ್ಯಾರ್ಥಿಯೊಬ್ಬ ತನ್ನ ಉತ್ತರ ಪತ್ರಿಕೆಯ ಎರಡೂ ಕಡೆ ಪುಸ್ತಕಗಳನ್ನ ಕವಾಟದ ರೀತಿಯಲ್ಲಿ ಇಟ್ಟುಕೊಂಡಿದ್ದಾನೆ. ಬೇರೊಬ್ಬರು ತನ್ನ ಪತ್ರಿಕೆಯನ್ನ ನೋಡಿ ನಕಲು ಮಾಡೋದನ್ನ ತಡೆಯೋದಕ್ಕೊಸ್ಕರ ಈ ರೀತಿ ಮಾಡಿದಂತೆ ಕಾಣ್ತಿದೆ.
ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಈ ಫೋಟೋವನ್ನ ಟ್ವಿಟರ್ನಲ್ಲಿ ಮೊದಲು ಶೇರ್ ಮಾಡಿದ್ದು ಈ ಕೆಲಸವನ್ನ ನೀವು ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಟ್ವೀಟಿಗರಂತೂ ನಾ ಮುಂದು ತಾ ಮುಂದು ಅಂತಾ ಕಮೆಂಟ್ಗಳ ಹೊಳೆಯನ್ನೇ ಹರಿಸಿದ್ದಾರೆ.
https://twitter.com/WhackkyCoco/status/1352816560084160517
https://twitter.com/Readerbeing/status/1352810844829200390