’ಐರನ್ ಮ್ಯಾನ್’ ಪುರಸ್ಕಾರಕ್ಕೆ ಭಾಜನರಾಗಿರುವ ಐಪಿಎಸ್ ಅಧಿಕಾರಿ ಕೃಷ್ಣ ಪ್ರಕಾಶ್, ತಮ್ಮ ಈ ಸಾಧನೆಯಿಂದ ವಿಶ್ವ ದಾಖಲೆಯ ಪುಸ್ತಕ ಸೇರಿದ್ದಾರೆ. ಈ ಗೌರವಕ್ಕೆ ಭಾಜನರಾದ ದೇಶದ ಮೊದಲ ಸರ್ಕಾರಿ ನೌಕರ, ನಾಗರಿಕ ಸೇವಕ, ಹಾಗೂ ಸಮವಸ್ತ್ರಧಾರಿ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪ್ರಕಾಶ್ ಭಾಜನರಾಗಿದ್ದಾರೆ.
ಫ್ರಾನ್ಸ್‌ನಲ್ಲಿ ನಡೆಯುವ ಐರನ್ ಮ್ಯಾನ್ ಟ್ರಯಾಥ್ಲಾನ್‌ನ 2017ರ ಇವೆಂಟ್‌ನಲ್ಲಿ ಭಾಗಿಯಾದ ಪ್ರಕಾಶ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಮೂರು ದಿನಗಳ ಮಟ್ಟಿಗೆ ನಡೆಯುವ ಈ ಟ್ರಯಾಥ್ಲಾನ್‌ನಲ್ಲಿ, 16-17 ಗಂಟೆಗಳ ಅವಧಿಯಲ್ಲಿ 3.8 ಕಿಮೀ ಈಜು, 180.2 ಕಿಮೀ ಸೈಕ್ಲಿಂಗ್ ಹಾಗೂ 42.2 ಕಿಮೀ ಓಟವನ್ನು ಪೂರೈಸಬೇಕಾಗುತ್ತದೆ.
ಸದ್ಯ ಪಿಂಪ್ರಿ ಚಿಂಚ್ವಾಡ್‌ನ ಪೊಲೀಸ್ ಆಯುಕ್ತರಾದ ಪ್ರಕಾಶ್, ಈ ವಿಚಾರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.