ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಆರೋಗ್ಯ ಕಾರ್ಯಕರ್ತರ ನಂತ್ರ 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಇದ್ರ ಜೊತೆ 45 ವರ್ಷ ಮೇಲ್ಪಟ್ಟ, ಕೆಲ ಖಾಯಿಲೆಯಿಂದ ಬಳಲುತ್ತಿರುವವರಿಗೂ ಕೊರೊನಾ ಲಸಿಕೆ ಹಾಕಲಾಗ್ತಿದೆ.
ಕೊರೊನಾ ಲಸಿಕೆ ಕೆಲವರ ಮೇಲೆ ಅಡ್ಡ ಪರಿಣಾಮ ಬೀರಿದೆ. ಕೊರೊನಾ ಲಸಿಕೆ ನಂತ್ರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂಥವರಿಗೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನೆಮ್ಮದಿ ಸುದ್ದಿಯನ್ನು ನೀಡಿದೆ.
ಕೊರೊನಾ ಲಸಿಕೆ ಹಾಕಿಸಿಕೊಂಡ ನಂತ್ರ ಆರೋಗ್ಯ ಸಮಸ್ಯೆ ಕಾಡಿದ್ರೆ ಮತ್ತು ಅವರು ಆಸ್ಪತ್ರೆಗೆ ದಾಖಲಾದ್ರೆ ಆರೋಗ್ಯ ವಿಮಾ ಕಂಪನಿಯು ಖರ್ಚು ಭರಿಸಬೇಕೆಂದು ಐಆರ್ಡಿಎಐ ಸ್ಪಷ್ಟಪಡಿಸಿದೆ. ಆರೋಗ್ಯ ವಿಮೆ ಪಡೆದಿರುವ ಗ್ರಾಹಕರು, ಕೊರೊನಾ ಲಸಿಕೆ ನಂತ್ರ ಆಸ್ಪತ್ರೆಗೆ ದಾಖಲಾದ್ರೆ ಆಸ್ಪತ್ರೆ ಖರ್ಚನ್ನು ನೀಡಲು ವಿಮಾ ಕಂಪನಿಗಳು ನಿರಾಕರಿಸುವಂತಿಲ್ಲ.
ಲಸಿಕೆ ನಂತ್ರ ಆಸ್ಪತ್ರೆಗೆ ದಾಖಲಾದ್ರೆ, ಅದ್ರ ಖರ್ಚು ಆರೋಗ್ಯ ವಿಮಾಯಡಿ ಬರಲಿದೆಯಾ ಎಂಬ ಪ್ರಶ್ನೆ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಗುರುವಾರ ಐಆರ್ಡಿಎಐ ಸ್ಪಷ್ಟನೆ ನೀಡಿದೆ. ಆರೋಗ್ಯ ವಿಮಾ ಕಂಪನಿಗಳು ಖರ್ಚು ಭರಿಸಲಿದ್ದು, ಕಂಪನಿಗಳು ಮೊದಲೇ ಹೇಳಿದ ಷರತ್ತುಗಳನ್ನು ಪಾಲಿಸಬೇಕೆಂದು ಐಆರ್ಡಿಎಐ ಹೇಳಿದೆ.