alex Certify ಇನ್ಸ್ಟಾಗ್ರಾಂ‌ ಡೌನ್ ಆಗಿದ್ದಕ್ಕೆ ಟ್ವಿಟರ್ ನಲ್ಲಿ ಮಿಮ್ಸ್ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಸ್ಟಾಗ್ರಾಂ‌ ಡೌನ್ ಆಗಿದ್ದಕ್ಕೆ ಟ್ವಿಟರ್ ನಲ್ಲಿ ಮಿಮ್ಸ್ ಸುರಿಮಳೆ

Instagram, Facebook Down For Hours But People Waited With Memes on Twitter

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರಂತೆ ಹಾಗಾಗಿದೆ‌ ನೆಟ್ಟಿಗರ ಪರಿಸ್ಥಿತಿ. ‌ ಇನ್ಸ್ಟಾಗ್ರಾಂ‌, ಫೇಸ್ ಬುಕ್ ಕೈ ಕೊಟ್ಟಿದ್ದಕ್ಕೆ ನೆಟ್ಟಿಗರು ಟ್ವಿಟರ್ ನಲ್ಲಿ ಮಿಮ್ಸ್ ಹೊಳೆ ಹರಿಸಿದ್ದಾರೆ.

ಹೌದು, ಗುರುವಾರ ರಾತ್ರಿ ಒಂದು ತಾಸಿನ ಮಟ್ಟಿಗೆ ಇನ್ಸ್ಟಾಗ್ರಾಂ‌, ಫೇಸ್ ಬುಕ್ ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿತ್ತು. ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಎರಡೂ ಮೊಬೈಲ್ ತಂತ್ರಾಂಶಗಳಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ನ್ಯೂಸ್ ಫೀಡ್ ಗಳು ಲೋಡ್ ಆಗುತ್ತಿರಲಿಲ್ಲ. ವೈಯಕ್ತಿಕ ಫೀಡ್ ಗಳೂ ರಿಫ್ರೆಶ್ ಆಗಿ ಅಪ್ ಡೇಟ್ ತೋರಿಸುತ್ತಿರಲಿಲ್ಲ.

ಕೆಲವೇ ಕ್ಷಣದಲ್ಲಿ ಟ್ವಿಟರ್ ನಲ್ಲಿ ಹಲವು ಪೋಸ್ಟ್ ಗಳು ಇನ್ಸ್ಟಾಗ್ರಾಂ‌ ಡೌನ್ ಹೆಸರಿನಲ್ಲಿ ಕಂಡು ಬಂದವು. ಇನ್ಸ್ಟಾಗ್ರಾಂ‌ ಡೌನ್ ಆಗಿದೆಯೋ ಅಥವಾ ವೈಫೈ ಕೈ ಕೊಟ್ಟಿದೆಯೋ ಎಂಬುದನ್ನು ತಿಳಿಯಲು ಟ್ವಿಟರ್ ಗೆ ಬರಬೇಕು ಎಂದು ಹಲವರು ಬರೆದಿದ್ದಾರೆ. ಹಲವು ವಿಡಿಯೋ ಫೋಟೋಗಳ ಮಿಮ್ಸ್ ತಯಾರಿಸಿ ಹರಿಬಿಟ್ಟಿದ್ದಾರೆ.‌ ಇನ್ಸ್ಟಾಗ್ರಾಂ‌, ಫೇಸ್ ಬುಕ್ ಸರಿ ಹೋದರೂ ಟ್ವಿಟರ್ ನಲ್ಲಿ ಆ ಕುರಿತ ಪೋಸ್ಟ್ ನೋಡುವುದೇ ಮಜ ನೀಡುತ್ತಿದೆ.

https://twitter.com/instagramdownnn/status/1306660460905861130?ref_src=twsrc%5Etfw%7Ctwcamp%5Etweetembed%7Ctwterm%5E1306660460905861130%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Finstagram-facebook-down-for-hours-but-people-waited-with-memes-on-twitter-2886557.html

https://twitter.com/pattyk_xo/status/1306658688992673792?ref_src=twsrc%5Etfw%7Ctwcamp%5Etweetembed%7Ctwterm%5E1306658688992673792%7Ctwgr%5Eshare_0&ref_url=https%3A%2F%2Fwww.news18.com%2Fnews%2Fbuzz%2Finstagram-facebook-down-for-hours-but-people-waited-with-memes-on-twitter-2886557.html

https://twitter.com/ChammoutHassan/status/1306658880815017984?ref_src=twsrc%5Etfw%7Ctwcamp%5Etweetembed%7Ctwterm%5E1306658880815017984%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Finstagram-facebook-down-for-hours-but-people-waited-with-memes-on-twitter-2886557.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...