ಸತ್ಯೇಂದ್ರ ಮಾಂಜಿ ಎಂಬ ವ್ಯಕ್ತಿ ಪರಿಸರ ರಕ್ಷಣೆ ಮಾಡಲು ನೀಡಿದ ಕೊಡುಗೆಗಳ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯನ್ನ ಗಳಿಸುತ್ತಿದ್ದಾರೆ. ಬಿಹಾರದ ಫಲ್ಘು ನದಿ ದಂಡೆಯಲ್ಲಿದ್ದ ಬಂಜರು ಭೂಮಿಯಲ್ಲಿ 10 ಸಾವಿರಕ್ಕೂ ಹೆಚ್ಚು ಪೇರಳೆ ಮರಗಳನ್ನ ನೆಡುವ ಮೂಲಕ ಪರಿಸರ ರಕ್ಷಣೆ ಮಾಡಿದ್ದಾರೆ.
ಈ ಯೋಜನೆಯು 15 ವರ್ಷಗಳ ಹಿಂದೆ ಆರಂಭಿಸಲಾಗಿದ್ದು ಇಷ್ಟು ಮರಗಳನ್ನ ಸಾಕುವಲ್ಲಿ ಮಾಂಜಿ ತುಂಬಾನೇ ಶ್ರಮ ವಹಿಸಿದ್ದಾರೆ. ಪರ್ವತ ಮನುಷ್ಯ ದಶರಥ್ ಮಾಂಜಿ ಅವರನ್ನ ಭೇಟಿಯಾದ ಬಳಿಕ ಸತ್ಯೇಂದ್ರರಿಗೆ ತಾನೂ ಏನಾದರೊಂದು ಸಾಧನೆ ಮಾಡಬೇಕು ಎಂಬ ಛಲ ಹುಟ್ಟಿಕೊಂಡಿದೆ.
ಶರ್ಟ್ ಬಟನ್ ಒಟ್ಟುಗೂಡಿಸಿದವನಿಗೆ ವಿಶ್ವ ದಾಖಲೆಯ ಪಟ್ಟ
ಇನ್ನು ಈ ವಿಚಾರವಾಗಿ ಮಾತನಾಡಿದ ಸತ್ಯಂದ್ರ, ನನಗೆ ಮಾಂಜಿ ಅವರು ಈ ಪ್ರದೇಶದಲ್ಲಿ ಗಿಡಗಳನ್ನ ನೆಡೋಕೆ ಹೇಳಿದ್ರು. ಆ ಸಮಯದಲ್ಲಿ ಈ ಪ್ರದೇಶ ಸಂಪೂರ್ಣ ಬಂಜರಾಗಿತ್ತು ಮಾತ್ರವಲ್ಲದೇ ಎಲ್ಲಿ ನೋಡಿದ್ರೂ ಮರಳ ರಾಶಿಯೇ ತುಂಬಿಕೊಂಡಿತ್ತು . ಹೀಗಾಗಿ ಇಲ್ಲಿ ಗಿಡಗಳ ಪೋಷಣೆ ಮಾಡೋದು ನಮಗೆ ಸುಲಭದ ಕೆಲಸವಂತೂ ಆಗಿರಲಿಲ್ಲ ಎಂದು ಹೇಳಿದ್ದಾರೆ. ಈಗ ಎಲ್ಲಾ ಮರಗಳಲ್ಲಿ ಪೇರಳೆ ಆಗುತ್ತಿದ್ದು ಸತ್ಯೇಂದ್ರರಿಗೆ ಒಳ್ಳೆಯ ಲಾಭವನ್ನೇ ತಂದು ಕೊಡ್ತಿದೆ.