ಕೋವಿಡ್-19 ಲಸಿಕಾ ಕಾರ್ಯಕ್ರಮಕ್ಕೆ ಇನ್ನಷ್ಟು ಚುರುಕು ನೀಡಲು ಭಾರತ ಸಜ್ಜಾಗುತ್ತಿದ್ದಂತೆ, ಪ್ರಮುಖ ಐಟಿ ಹಾಗೂ ಕನ್ಸಲ್ಟಿಂಗ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕೋವಿಡ್ ಲಸಿಕೆ ಹಾಕಿಸಲು ತಗುಲುವ ವೆಚ್ಚವನ್ನು ಭರಿಸುವುದಾಗಿ ಹೇಳಿಕೊಂಡಿವೆ.
60 ವರ್ಷ ಮೇಲ್ಪಟ್ಟವರು ಹಾಗೂ ವೈದ್ಯಕೀಯ ಸವಾಲುಗಳನ್ನು ಎದುರಿಸುತ್ತಿರುವ 45 ವರ್ಷ ಮೇಲ್ಪಟ್ಟ ಮಂದಿ ಲಸಿಕೆ ತೆಗೆದುಕೊಳ್ಳಲು ಸೋಮವಾರದಿಂದ ಅವಕಾಶ ಕೊಟ್ಟ ಬಳಿಕ ಕೋವಿಡ್-19 ಲಸಿಕೆ ಕಾರ್ಯಕ್ರಮ ಇನ್ನಷ್ಟು ಚುರುಕು ಪಡೆದುಕೊಂಡಿದೆ.
‘ಕೊರೊನಾ’ ಲಸಿಕೆ ಅಭಿಯಾನ ಕುರಿತಂತೆ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ತೀರ್ಮಾನ
ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಲಸಿಕೆ ಹಾಕಿಸಲು ಆರೋಗ್ಯ ಸೇವಾದಾರರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ನೋಡುತ್ತಿದೆ. ಇದೇ ವೇಳೆ ಅಕ್ಸೆಂಚರ್ ತನ್ನ ಉದ್ಯೋಗಿಗಳು ಹಾಗೂ ಅವರ ಕುಟುಂಬಸ್ಥರಿಗೆ ಲಸಿಕೆ ಪಡೆದುಕೊಳ್ಳಲು ತಗುಲುವ ವೆಚ್ಚ ಭರಿಸಲು ಮುಂದಾಗಿದೆ.
ಜನವರಿ 16ರಿಂದ ಆರಂಭಗೊಂಡು ಇದುವರೆಗೂ 1.48 ಕೋಟಿ ಮಂದಿಗೆ ಕೋವಿಡ್-19 ಲಸಿಕೆ ಕೊಡಲಾಗಿದೆ. ಈ ಪೈಕಿ 45-59 ವರ್ಷ ವಯಸ್ಸಿನ ನಡುವಿನ 2.08 ಲಕ್ಷ ಮಂದಿಗೆ ಲಸಿಕೆ ಹಾಕಲಾಗುವುದು.