ಮೊದಲನೇ ವಿಶ್ವ ಮಹಾಯುದ್ಧದ ವೇಳೆ ಫೈಟರ್ ಪೈಲಟ್ ಆಗಿದ್ದ ಏಕೈಕ ಭಾರತೀಯ ಲೆಫ್ಟೆನೆಂಟ್ ಇಂದಿಯಾ ಲಾಲ್ ರಾಯ್, ಈ ಯುದ್ಧದ ಸಂದರ್ಭದಲ್ಲಿ ತಮ್ಮ 19ನೇ ವಯಸ್ಸಿಗೇ ನಿಧನರಾಗಿದ್ದರು.
1898ರ ಡಿಸೆಂಬರ್ 2ರಂದು ಜನಿಸಿದ ಇಂದ್ರರನ್ನು ಅವರ ಸಹೋದ್ಯೋಗಿಗಳು ನಲ್ಮೆಯಿಂದ ಲಡ್ಡಿ ಎಂದು ಕರೆಯುತ್ತಿದ್ದರು. ಇಂದ್ರ ಹೆಸರನ್ನು ವಿಶ್ವ ಮಹಾಯುದ್ಧದ ದಾಖಲೆಗಳಲ್ಲಿ ಬರೆಯಲಾಗಿದೆ. ಜುಲೈ 1918ರಲ್ಲಿ ಯುದ್ಧಭೂಮಿಯಲ್ಲಿ ಮೃತಪಡುವ ಮುನ್ನ ಇಂದ್ರ 10 ಮಂದಿ ಶತ್ರುಗಳನ್ನು ಕೊಂದಿದ್ದರು.
ಕಲ್ಕತ್ತಾದಲ್ಲಿ ಜನಿಸಿದ ಇಂದ್ರ 1901ರಿಂದ ಲಂಡನ್‌ನಲ್ಲಿ ವಾಸವಿದ್ದರು. ತನ್ನ 15ನೇ ವಯಸ್ಸಿಗೇ ಯುದ್ಧ ವಿಮಾನ ಹಾರಿಸುವ ಆಸಕ್ತಿ ಬೆಳೆಸಿಕೊಂಡ ಇಂದ್ರ ರಾಯಲ್ ಫ್ಲೈಯಿಂಗ್ ಕ್ಲಬ್‌ನಲ್ಲಿ ಸೆಕೆಂಡ್ ಲೆಫ್ಟೆನೆಂಟ್ ಆಗಿ ಜುಲೈ 5, 1917ರಲ್ಲಿ ಕಮಿಷನ್ಡ್ ಆಗಿದ್ದರು.
ಬ್ರಿಟನ್ ಸಂಸ್ಥಾನ ಕೊಡಮಾಡುವ ಪ್ರತಿಷ್ಠಿತ ಡಿಸ್ಟಿಂಗ್ವಿಷ್ಡ್ ಕ್ರಾಸ್ ಗೌರವಕ್ಕೆ ಭಾಜನರಾಗಿದ್ದ ಇಂದ್ರರ ಗೌರವಾರ್ಥ ಭಾರತವು ಅನೇಕ ವರ್ಷಗಳ ಹಿಂದೆ ಅಂಚೆ ಸ್ಟಾಂಪ್ ಒಂದನ್ನು ಬಿಡುಗಡೆ ಮಾಡಿತ್ತು.