ಲಂಚ ಕೊಡಲಿಲ್ಲ ಎನ್ನುವ ಕಾರಣಕ್ಕೆ ಹದಿಹರೆಯದ ಬಡ ಹುಡುಗನೊಬ್ಬನ ತಳ್ಳುಗಾಡಿಯನ್ನು ಧ್ವಂಸ ಮಾಡಿದ್ದ ಸರ್ಕಾರಿ ಅಧಿಕಾರಿಗಳ ಲಂಚಾವತಾರದ ವರದಿಯೊಂದು ಎಲ್ಲೆಡೆ ಸದ್ದು ಮಾಡಿತ್ತು.
ಇದೀಗ ಇಂದೋರಿನ ಸ್ಥಳೀಯರು ಆ ಹುಡುಗನ ನೆರವಿಗೆ ಬಂದಿದ್ದು, ಆತನ ತಳ್ಳು ಗಾಡಿಯನ್ನು ರಿಪೇರಿ ಮಾಡಿಸಿಕೊಡಲು ಚಿಂತಿಸಿದ್ದಾರೆ. ಇಂದೋರ್ ಪ್ರೆಸ್ ಕ್ಲಬ್ ಹುಡುಗನಿಗೆ ಪಡಿತರ ಹಾಗೂ ಹಣವನ್ನು ನೀಡಿದೆ.
14 ವರ್ಷದ ಪರಸ್ ರಾಯ್ಕರ್ ಹೆಸರಿನ ಈ ಹುಡುಗನಿಗೆ ಆದ ಅನ್ಯಾದ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಶೇರ್ ಮಾಡಲಾಗಿದ್ದು, ಸರ್ಕಾರಿ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.