ನಿರ್ಗತಿಕ ಹಿರಿಯ ಜೀವಗಳನ್ನು ನಗರದ ಹೊರವಲಯಕ್ಕೆ ಕರೆದೊಯ್ದು ಬಿಡುತ್ತಿದ್ದ ಪಾಲಿಕೆ ಕಾರ್ಮಿಕರ ವಿಡಿಯೋವೊಂದು ವೈರಲ್ ಆದ ಬಳಿಕ ಇಂದೋರ್ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಎಲ್ಲೆಡೆಯಿಂದ ಛೀಮಾರಿ ಕೇಳಿ ಬಂದಿದೆ.
ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಖರ್ಜಾನಾ ಗಣೇಶ ಮಂದಿರಕ್ಕೆ ಧಾವಿಸಿದ್ದ ಇಂದೋರ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಮನೀಶ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ಪಾಲಿಕೆಯ ನೌಕರರ ಈ ತಪ್ಪು ನಡವಳಿಕೆಗೆ ಅವರ ಪರವಾಗಿ ದೇವರಲ್ಲಿ ಕ್ಷಮೆಯಾಚಿಸಿರುವುದಾಗಿ ತಿಳಿಸಿದ್ದಾರೆ.
4 ವರ್ಷದ ಬಾಲಕಿ ಕಣ್ಣಿಗೆ ಬಿತ್ತು ಡೈನೋಸಾರ್ ಹೆಜ್ಜೆ ಗುರುತು
“ನಾವು ಅಧಿಕಾರಿಗಳು, ಹೀಗಾಗಿ ನಮ್ಮ ಹೊಣೆಗಾರಿಕೆಯಿಂದ ಓಡಿ ಹೋಗಲು ಸಾಧ್ಯವಿಲ್ಲ. ಹೀಗಾಗಿ, ನಮ್ಮೆಲ್ಲಾ ತಪ್ಪುಗಳಿಗೆ ಕ್ಷಮಿಸಿಬಿಡಲು ದೇವರಲ್ಲಿ ಕೇಳಿಕೊಂಡಿದ್ದೇವೆ” ಎಂದು ಸಿಂಗ್ ವರದಿಗಾರರಿಗೆ ತಿಳಿಸಿದ್ದಾರೆ.
ಈ ಅಮಾನವೀಯ ಘಟನೆಯ ವಿಡಿಯೋ ವೈರಲ್ ಆಗುತ್ತಲೇ, ಇಂದೋರ್ ಮಹಾನಗರ ಪಾಲಿಕೆಯ ಉಪ ಆಯುಕ್ತರನ್ನು ಅಮಾನತು ಮಾಡಿರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇದೇ ವೇಳೆ ಇಬ್ಬರು ತಾತ್ಕಾಲಿಕ ನೌಕರರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ.