
ಇಷ್ಟು ದಿನ ಕೊರೊನಾ ವಿರುದ್ಧದ ಜಾಗೃತಿಗಾಗಿ ವಿವಿಧ ಪೋಷಾಕುಗಳ ಮೂಲಕ ಜನರಿಗೆ ಮಾಹಿತಿ ನೀಡುತ್ತಿದ್ದ ಪೊಲೀಸರು ಇದೀಗ ಲಸಿಕೆ ಬಗ್ಗೆಯೂ ವಿಶೇಷ ಜಾಗೃತಿಗೆ ಮುಂದಾಗಿದ್ದಾರೆ. ಮಧ್ಯ ಪ್ರದೇಶದ ಇಂದೋರ್ನಲ್ಲಿ ಕೊರೊನಾ ಲಸಿಕೆ ಪಡೆಯುವ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಯಮರಾಜನ ವೇಷದಲ್ಲಿ ಬಂದು ಎಲ್ಲರ ಗಮನ ಸೆಳೆದಿದ್ದಾರೆ.
ವಿಮೆ ದಾಖಲೆಗಳ ಬಗ್ಗೆ ಇನ್ಮುಂದೆ ಚಿಂತೆ ಬೇಡ…! ಇಲ್ಲಿ ಸುರಕ್ಷಿತವಾಗಿರಲಿದೆ ಕಾಗದಪತ್ರ
ಕೊರೊನಾ ವೈರಸ್ ವಿರುದ್ಧದ ಜಾಗೃತಿಗಾಗಿ ಪೊಲೀಸರು ಯಮರಾಜನ ವೇಷ ಧರಿಸಿದ್ದು ಇದೇ ಮೊದಲೇನಲ್ಲ. ಕಳೆದ ವರ್ಷ ಏಪ್ರಿಲ್ನಲ್ಲಿ ಲಾಕ್ಡೌನ್ ಅವಧಿ ಜಾರಿಯಲ್ಲಿದ್ದ ವೇಳೆ ಬೆಂಗಳೂರು ಪೊಲೀಸರೊಬ್ಬರು ಯಮರಾಜನ ವೇಷ ಧರಿಸಿ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಿದ್ದರು.