ದೇಶದಲ್ಲಿ ಅತ್ಯಾಚಾರ ತಡೆಗೆ ಸಾಕಷ್ಟು ಕ್ರಮಗಳನ್ನ ಕೈಗೊಂಡ ಬಳಿಕವೂ ಮಧ್ಯ ಪ್ರದೇಶದಲ್ಲಿ ನಡೆದ ಸರಣಿ ಅತ್ಯಾಚಾರ ಸಮಾಜವನ್ನ ಮತ್ತೊಮ್ಮೆ ಬೆಚ್ಚಿ ಬೀಳಿಸಿದೆ .
14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದು ಮಾತ್ರವಲ್ಲದೇ ಆಕೆಗೆ ಕಲ್ಲಿನಿಂದ ಹೊಡೆದ ಜೀವಂತವಾಗಿ ಹೂಳಲು ಯತ್ನಿಸಿದ ಘಟನೆ ಬೆತುಲ್ನಲ್ಲಿ ನಡೆದಿದೆ. ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಇತ್ತ ಇಂದೋರ್ನಲ್ಲಿ 19 ವರ್ಷದ ಬಾಲಕಿಯೊಬ್ಬಳ ಮೇಲೆ ಸಾಮೂಹಿತ ಅತ್ಯಾಚಾರ ನಡೆಸಿ ಬಳಿಕ ಚೀಲದಲ್ಲಿ ತುಂಬಿ ರೈಲ್ವೆ ಹಳಿಗಳ ಮೇಲೆ ಎಸೆಯಲಾಗಿತ್ತು. ಇಲ್ಲಿ ಕೂಡ ಸಂತ್ರಸ್ತೆ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ.
ಬೆತುಲ್ನ ಹಳ್ಳಿಯೊಂದರ ಜಮೀನಿನಲ್ಲಿ ಮೋಟಾರ್ ಸ್ವಿಚ್ ಬಂದ್ ಮಾಡಲು ಹೋಗಿದ್ದ 14 ವರ್ಷದ ಬಾಲಕಿ ಒಬ್ಬಳೇ ಇದ್ದಿದ್ದನ್ನ ಕಂಡ ಆರೋಪಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಅತ್ಯಾಚಾರ ನಡಸಿದ ಬಳಿಕ ಆಕೆಯನ್ನ ನಾಲೆಗೆ ಎಸೆದು ಕಲ್ಲುಗಳಿಂದ ಮುಚ್ಚಿ ಜೀವಂತವಾಗಿ ಹೂಳಲು ಯತ್ನಿಸಿದ್ದ ಎನ್ನಲಾಗಿದೆ.
ಕುಟುಂಬಸ್ಥರು ಬಾಲಕಿಯನ್ನ ಹುಡುಕುತ್ತಾ ಸ್ಥಳಕ್ಕೆ ತೆರಳಿದ ವೇಳೆ ನಾಲೆಯಲ್ಲಿ ಕಲ್ಲುಗಳ ರಾಶಿಯ ಅಡಿಯಲ್ಲಿ ನೋವಿನಿಂದ ನರಳುತ್ತಿದ್ದ ಬಾಲಕಿ ಕಂಡು ಬಂದಿದ್ದಾಳೆ. ಈ ಸಂಬಂಧ 35 ವರ್ಷದ ಆರೋಪಿಯನ್ನ ಬಂಧಿಸಲಾಗಿದ್ದು ಅತ್ಯಾಚಾರ ಹಾಗೂ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆಯ ಖಾಸಗಿ ಅಂಗಾಂಗ ಹಾಗೂ ದವಡೆ ಭಾಗದಲ್ಲಿ ತೀವ್ರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ನಾಗ್ಪುರ ವೈದ್ಯಕೀಯ ಕಾಲೇಜಿನಲ್ಲಿ ದಾಖಲು ಮಾಡಲಾಗಿದೆ.
ಇಂದೋರ್ನಲ್ಲಿ ಯುವತಿಯ ಮಾಜಿ ಪ್ರೇಮಿ ಆಕೆಯನ್ನ ನಂದಿ ಗ್ರಾಮದ ಫ್ಲ್ಯಾಟ್ ಒಂದಕ್ಕೆ ಕರೆದೊಯ್ದು ಆತನ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಆಕೆ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಿದಂತೆ ಚಾಕುವಿನಿಂದ ಇರಿದು ಚೀಲಕ್ಕೆ ತುಂಬಿ ರೈಲ್ವೆ ಹಳಿಗಳ ಮೇಲೆ ಆಕೆಯನ್ನ ಬಿಸಾಡಿ ಹೋಗಿದ್ದಾರೆ. ಮಧ್ಯ ಪ್ರದೇಶ ಸರ್ಕಾರ ನಡೆಸುತ್ತಿರುವ ಸಮ್ಮಾನ್ ಕ್ಯಾಂಪೇನ್ನಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಸ್ಥಳೀಯರ ಸಹಾಯದಿಂದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆರೋಪಿಗಳಲ್ಲಿ ಓರ್ವನನ್ನ ಪೊಲೀಸರು ಬಂಧಿಸಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ.