
ಭಾರತದಲ್ಲಿ ಆತ್ಯಂತ ಶ್ರೀಮಂತ ಭಿಕ್ಷಕರು ಹಾಗೂ ಅವರ ಸಂಪತ್ತು ಎಷ್ಟು ಅನ್ನೋದು ನಿಮಗೆ ತಿಳಿದಿದೆಯೇ…? ಲಕ್ಷಗಟ್ಟಲೇ ಸಂಪಾದನೆ ಇದ್ದರೂ ಕೂಡ ಕೆಲವರು ಇನ್ನೂ ಭಿಕ್ಷಾಟನೆಯನ್ನ ಮಾತ್ರ ಬಿಟ್ಟಿಲ್ಲ.
1. ಭರತ್ ಜೈನ್ : ಭರತ್ ಜೈನ್ ಮುಂಬೈನ ಪರೆಲ್ ಪ್ರಾಂತ್ಯದಲ್ಲಿ ಕೆಲಸ ಮಾಡ್ತಾರೆ. ಇವರು 70 ಲಕ್ಷ ರೂಪಾಯಿ ಮೌಲ್ಯದ ಎರಡು ಅಪಾರ್ಟ್ಮೆಂಟ್ಗಳನ್ನ ಹೊಂದಿದ್ದಾರೆ. ಇವರು ತಿಂಗಳಿಗೆ 75 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಾರಂತೆ.
2. ಲಕ್ಷ್ಮೀ ದಾಸ್ : ಲಕ್ಷ್ಮೀ ದಾಸ್ 16 ವರ್ಷದವಳಾಗಿದ್ದಾಗಲೇ ಅಂದರೆ 1964ರಿಂದಲೇ ಭಿಕ್ಷಾಟನೆ ಆರಂಭಿಸಿದ್ದರು. 50 ವರ್ಷದ ಭಿಕ್ಷಾಟನೆ ಜೀವನದಲ್ಲಿ ಸಿಕ್ಕಾಪಟ್ಟೆ ಹಣ ಸಂಪಾದಿಸಿದ್ದಾರೆ.
3. ಕೃಷ್ಣ ಕುಮಾರ್ : ಮುಂಬೈನ ಚರ್ನಿ ರಸ್ತೆಯಲ್ಲಿ ಭಿಕ್ಷಾಟನೆ ಮಾಡುವ ಇವರು ಸ್ವಂತ ಫ್ಲ್ಯಾಟ್ ಖರೀದಿ ಮಾಡಿದ್ದು ಸಹೋದರನ ಜೊತೆ ಇದ್ದಾರೆ. ದಿನಕ್ಕೆ ಇವರು 1500 ರೂಪಾಯಿ ಸಂಪಾದಿಸುತ್ತಾರೆ.
4. ಬುರ್ಜು ಚಂದ್ರ ಆಜಾದ್ : ಬುರ್ಜು ಚಂದ್ರ ಆಜಾದ್ 8.77 ಲಕ್ಷ ರೂಪಾಯಿ ಎಫ್ಡಿ ಹೊಂದಿದ್ದಾರೆ ಹಾಗೂ 1.5 ಲಕ್ಷ ರೂಪಾಯಿ ನಗದನ್ನ ಹೊಂದಿದ್ದಾರೆ. 2019ರಲ್ಲಿ ಇವರು ರೈಲು ಅಪಘಾತದಲ್ಲಿ ಸಾವನ್ನಪ್ಪಿದ ಬಳಿಕ ಪೊಲೀಸರು ಈ ಸಂಪತ್ತನ್ನ ಲೆಕ್ಕ ಹಾಕಿದ್ದಾರೆ.
5. ಪಪ್ಪು ಕುಮಾರ್ : ಅಪಘಾತದಲ್ಲಿ ಕಾಲು ಕಳೆದುಕೊಂಡ ಬಳಿಕ ಪಾಟ್ನಾದ ರೈಲು ನಿಲ್ದಾಣದಲ್ಲಿ ಪಪ್ಪು ಕುಮಾರ್ ಭಿಕ್ಷಾಟನೆ ಆರಂಭಿಸಿದ್ರು. ಕುಮಾರ್ ಬರೋಬ್ಬರಿ 1.25 ಕೋಟಿ ರೂಪಾಯಿ ಹೊಂದಿದ್ದಾರೆ.




