alex Certify ಸಿದ್ದವಾಗುತ್ತಿರುವ ʼಕೊರೊನಾʼ ಲಸಿಕೆ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ದವಾಗುತ್ತಿರುವ ʼಕೊರೊನಾʼ ಲಸಿಕೆ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ

More than a dozen Covid-19 vaccines from over 100 candidates globally are currently being tested in humans, and some have shown potential in early-stage trials.

ಹೈದರಾಬಾದ್ ಮೂಲದ ಭಾರತ್‌ ಬಯೋಟೆಕ್ ಲ್ಯಾಬ್‌ ಹಾಗೂ ಝೈಡಸ್ ಕ್ಯಾಡಿಲ್ಲಾ ಅಭಿವೃದ್ಧಿ ಪಡಿಸಿರುವ ಕೋವ್ಯಾಕ್ಸಿನ್ ಹಾಗೂ ZyCoV-D ಮದ್ದುಗಳನ್ನು ಮಾನವರ ಮೇಲೆ ಪ್ರಯೋಗ ಮಾಡಲು ಡಿಸಿಜಿಐ ಅನುಮತಿ ನೀಡಿದ್ದು, ಕೊರೋನಾ ವೈರಸ್‌ ವಿರುದ್ಧದ ಇದರ ಪ್ರಭಾವವೇನು ಎಂದು ತಿಳಿದುಕೊಳ್ಳಲು ಕಾತರ ಎಲ್ಲೆಡೆ ಮನೆ ಮಾಡಿದೆ.

ಇದೀಗ ಜಗತ್ತಿನಲ್ಲೇ ನಾಲ್ಕನೇ ಅತ್ಯಂತ ಹೆಚ್ಚು ಸಂಖ್ಯೆಯ ಕೋವಿಡ್-19 ಸೋಂಕಿತರನ್ನು ಹೊಂದಿರುವ ಭಾರತದಲ್ಲಿ ಈ ಸೋಂಕಿನ ವಿರುದ್ಧ ಮೊದಲು ಮದ್ದು ಸಿಕ್ಕಿಬಿಟ್ಟರೆ ಸಾಕು ಎಂಬಂತಾಗಿಬಿಟ್ಟಿದೆ.

ಕೋವಿಡ್-19ಗೆ ಮದ್ದು ಕಂಡುಹಿಡಿಯಲು ಮುಂದಾಗಿರುವ ಏಳು ಲ್ಯಾಬ್‌ಗಳಲ್ಲಿ ಭಾರತ್‌ ಬಯೋಟೆಕ್ ಸಹ ಒಂದಾಗಿದ್ದು, ಹಂತ-1 ಹಾಗೂ ಹಂತ-2ರ ಪ್ರಯೋಗಗಳನ್ನು ಮಾಡಲು ಮುಂದಾಗಿದೆ. ಈ ಮದ್ದುಗಳು ಅದೆಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿವೆ ಎಂದು ತಿಳಿಯಲು ಇನ್ನೂ ಕಾದು ನೋಡಬೇಕಿದೆ.

ಈ ಮೇಲ್ಕಂಡ ಮದ್ದುಗಳನ್ನು ಇಲಿಗಳು, ಗಿನೀ ಹಂದಿಗಳು ಹಾಗೂ ಮೊಲಗಳ ಮೇಲೆ ಪ್ರಯೋಗ ಮಾಡಿದ್ದು, ಅವುಗಳಲ್ಲಿ ರೋಗನಿರೋಧಕ ಶಕ್ತಿಯ ಪ್ರತಿಕ್ರಿಯೆಯನ್ನು ಉದ್ದೀಪಿಸುವ ಕೆಲಸ ಯಶಸ್ವಿಯಾಗಿದ್ದು, ಈ ವೈರಸ್‌ ಅನ್ನು ನ್ಯೂಟ್ರಲೈಝ್ ಮಾಡಲು ನೆರವಾಗಿವೆ ಎನ್ನಲಾಗಿದೆ.

ಇದೀಗ ಭಾರತಾದ್ಯಂತ 1000ಕ್ಕೂ ಹೆಚ್ಚು ಮಂದಿಯ ಮೇಲೆ ದೇಶದ ವಿವಿಧೆಡೆ ಇದೇ ಮದ್ದನ್ನು ಪ್ರಯೋಗಿಸಿ ನೋಡಲಾಗುವುದು ಎಂದು ಝೈಡಸ್‌ ತಿಳಿಸಿದೆ. ಈ ಮದ್ದು ಮಾನವರ ಮೇಲೆ ಯಾವುದೇ ರೀತಿಯ ಮಾರಣಾಂತಿಕ ದುಷ್ಪರಿಣಾಮ ಬೀರದು ಎಂದು ಮೊಲಗಳ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ ಎಂದು ಕಂಪನಿ ತಿಳಿಸಿದೆ.

ದೇಶದಲ್ಲೆ ಅದಾಗಲೇ 6,20,000+ ಕೋವಿಡ್‌-19 ಪಾಸಿಟಿವ್ ಪೀಡಿತರು ಕಂಡು ಬಂದಿದ್ದು, 18,000ಕ್ಕೂ ಹೆಚ್ಚು ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...