ಸ್ವದೇಶಿ ನಿರ್ಮಿತ ಭಾರತ್ ಬಯೋಟೆಕ್ ಸಿದ್ಧ ಪಡಿಸುತ್ತಿರುವ ಕೊರೊನಾ ಲಸಿಕೆ 60 ಪ್ರತಿಶತ ಪರಿಣಾಮಕಾರಿಯಾಗಿರಲಿದೆ ಅಂತಾ ಭಾರತ್ ಬಯೋಟೆಕ್ ನಿರ್ದೇಶಕ ಸಾಯಿ ಡಿ ಪ್ರಸಾದ್ ಹೇಳಿದ್ದಾರೆ. ಕೋ ವ್ಯಾಕ್ಸಿನ್ನ ಪ್ರಯೋಗಳ ಫಲಿತಾಂಶಗಳನ್ನ ಆಧರಿಸಿ ಅವರು ಈ ಹೇಳಿಕೆ ನೀಡಿದ್ದಾರೆ.
ಕೋ ವ್ಯಾಕ್ಸಿನ್ ಕೊರೊನಾ ವಿರುದ್ಧ 60 ಪ್ರತಿಶತ ಪರಿಣಾಮಕಾರಿಯಾಗಿ ಇರಬೇಕು ಎಂಬ ಗುರಿಯನ್ನ ಹೊಂದಿತ್ತು. ಆದರೆ ಲಸಿಕೆ ಪ್ರಯೋಗದ ಫಲಿತಾಂಶಗಳನ್ನ ನೋಡ್ತಾ ಇದ್ದರೆ ಇದು ನಮ್ಮ ಗುರಿಗಿಂತಲೂ ಹೆಚ್ಚು ಪರಿಣಾಮಕಾರಿ ಎನಿಸುತ್ತಿದೆ ಅಂತಾ ಹೇಳಿದ್ರು.
ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಲಸಿಕೆ ಕಂಡುಹಿಡಿಯುತ್ತಿರುವ ಕಂಪನಿಗಳಿಗೆ ಕನಿಷ್ಟ 50 ಪ್ರತಿಶತ ಪರಿಣಾಮಕಾರಿಯಾದ ಸ್ಪಷ್ಟ ಪ್ರದರ್ಶನ ನೀಡಬೇಕು ಅಂತಾ ಮಾನದಂಡ ವಿಧಿಸಿದೆ. ಆದರೆ ಕೋ ವ್ಯಾಕ್ಸಿನ್ 60 ಪ್ರತಿಶತ ಪರಿಣಾಮಕಾರಿಯಾಗಿರೋದು ಒಳ್ಳೆಯ ಬೆಳವಣಿಗೆಯಾಗಿದೆ.
ನಮ್ಮ ಕೊನೆಯ ಪ್ರಯೋಗದಲ್ಲೂ ಸಂಪೂರ್ಣ ಯಶಸ್ಸನ್ನ ಕಂಡರೆ ಕೂಡಲೇ ಲಸಿಕೆಗೆ ಅನುಮೋದನೆ ಪಡೆದು 2021ರ ತ್ರೈಮಾಸಿಕದಲ್ಲಿ ಲಸಿಕೆ ತಯಾರಿಸುವ ಗುರಿ ಹೊಂದಿದ್ದೇವೆ ಅಂತಾ ಭಾರತ್ ಬಯೋಟೆಕ್ ಹೇಳಿದೆ.