Krishna and His Leela ಹೆಸರಿನ ವೆಬ್ ಸೀರೀಸ್ ಮೂಲಕ ಕೃಷ್ಣನ ಹೆಸರಿನ ಪುರುಷನೊಬ್ಬ ರಾಧೆ ಹೆಸರಿನ ಮಹಿಳೆ ಸೇರಿದಂತೆ ಅನೇಕ ವನಿತೆಯರೊಂದಿಗೆ ಲೈಂಗಿಕ ಮೋಜಿನಲ್ಲಿ ತೊಡಗಿರುವ ಕಥೆ ತೋರುತ್ತಿರುವ ಕಾರಣದಿಂದ ಭಾರತದಲ್ಲಿ ನೆಟ್‌ಫ್ಲಿಕ್ಸ್ ಈಗ ಬಹಳ ವಿವಾದಕ್ಕೆ ಕಾರಣವಾಗಿದೆ.
ಹಿಂದೂ ವಿರೋಧಿ ನಿಲುವಿನ ಈ ನೆಟ್ ಫ್ಲಿಕ್ಸ್‌ಅನ್ನು ಧರ್ಮವಿರೋಧಿ ಎಂದು ದೂರುತ್ತಿರುವ ಅನೇಕ ಮಂದಿ ನೆಟ್ಟಿಗರು ಈಗ ನೆಟ್‌ಫ್ಲಿಕ್ಸ್ ಬಹಿಷ್ಕರಿಸಬೇಕೆಂದು ಕೂಗೆತ್ತಿದ್ದಾರೆ.
ಹಿಂದೂ ಧರ್ಮದಲ್ಲಿ ಪೂಜನೀಯರಾದ ಶ್ರೀಕೃಷ್ಣ ಹಾಗೂ ರಾಧೆಯನ್ನು ಕೆಟ್ಟದಾಗಿ ಬಿಂಬಿಸಿರುವ ವಿಚಾರವು ಜನರಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮದೇ ದುಡ್ಡು ತಿಂದು ನಮ್ಮದೇ ಧರ್ಮಕ್ಕೇ ಕೆಳಂಕ ತರುವ ಯತ್ನಗಳನ್ನು ಮಾಡುತ್ತಿರುವ ನೆಟ್‌ಫ್ಲಿಕ್ಸ್ ಬಾಯ್ಕಾಟ್ ಆಗಬೇಕೆಂದು ಕೂಗುಗಳು ಬಲ ಪಡೆದುಕೊಂಡಿವೆ.