ನವದೆಹಲಿ: ವಿಶ್ವದೆಲ್ಲೆಡೆ ಆತಂಕ ಮೂಡಿಸಿರುವ ಕೊರೋನಾ ತಡೆಗೆ ಲಸಿಕೆ ಬಿಡುಗಡೆಯಾಗುವ ಹಂತದಲ್ಲಿವೆ. ರಷ್ಯಾ ಲಸಿಕೆ ಈಗಾಗಲೇ ಬಿಡುಗಡೆಯಾಗಿದ್ದು ದೇಶ, ವಿದೇಶದಲ್ಲಿಯೂ ಲಸಿಕೆಯ ಅಂತಿಮಹಂತದ ಪ್ರಯೋಗಗಳು ನಡೆದಿವೆ.
ದೇಶದ ಜನರಿಗೆ ಇನ್ನು 73 ದಿನದಲ್ಲಿ ಉಚಿತವಾಗಿ ಕೊರೋನಾ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಹೇಳಲಾಗಿದೆ. ಆಕ್ಸ್ ಫರ್ಡ್ ಯುನಿವರ್ಸಿಟಿ ತಯಾರಿಸಿದ ಕೋವಿಶೀಲ್ಡ್ ಹೆಸರಿನ ಲಸಿಕೆಯನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದ್ದು 2022 ರ ವರೆಗೂ ಲಸಿಕೆ ಖರೀದಿಸಿ ವಿತರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ರಾಷ್ಟ್ರೀಯ ಲಸಿಕೆ ಮಿಷನ್ ಅಡಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಪುಣೆಯಲ್ಲಿರುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಆಕ್ಸ್ ಫರ್ಡ್ ವಿವಿ ಜೊತೆಗೆ ಒಪ್ಪಂದ ಮಾಡಿಕೊಂಡು ದೇಶದಲ್ಲಿ ಲಸಿಕೆಯನ್ನು ಉತ್ಪಾದಿಸಲಾಗುತ್ತಿದೆ. ಟ್ರಯಲ್ ಮುಂದುವರೆದಿದ್ದು ಎಲ್ಲಾ ರೀತಿಯ ಟ್ರಯಲ್ ಮುಗಿಯುತ್ತಿದ್ದಂತೆ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ವಿತರಿಸಲಾಗುವುದು ಎಂದು ಹೇಳಲಾಗಿದೆ.