ಭಾರತೀಯರು ಪ್ರತಿ ದಿನ ಸರಾಸರಿ 9.2 ತಾಸು ನಿದ್ರೆಯಲ್ಲೇ ಕಳೆಯುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.
ರಾಷ್ಟ್ರೀಯ ಸಾಂಖ್ಯಿಕ ಇಲಾಖೆ 2019 ರ ಜನವರಿಯಿಂದ 2020 ರ ಡಿಸೆಂಬರ್ ವರೆಗೆ ಅಂಡಮಾನ್ ನಿಕೋಬಾರ್ ಬಿಟ್ಟು ಭಾರತದ ಬಹುತೇಕ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸರ್ವೇ ಕೈಗೊಂಡಿದೆ.
5,947 ಗ್ರಾಮಗಳ 82,897 ಮನೆಗಳು ಹಾಗೂ 3,998 ನಗರಗಳ 55,902 ಮನೆಗಳಲ್ಲಿ ಸರ್ವೇ ನಡೆಸಲಾಗಿದೆ. ಗ್ರಾಮೀಣ ಭಾಗದಲ್ಲಿ 6 ವರ್ಷದ ಮೇಲಿನ 2,73,195 ಜನರನ್ನು, ನಗರದಲ್ಲಿ 1,74,055 ಜನರಿಂದ ಮಾಹಿತಿ ಪಡೆಯಲಾಗಿದೆ. ಉತ್ಪಾದಕ ಕಾರ್ಯಗಳಲ್ಲಿ ಎಷ್ಟು ಜನ ಎಷ್ಟು ಹೊತ್ತು ತೊಡಗಿಕೊಳ್ಳುತ್ತಾರೆ ಎಂಬ ಮಾಹಿತಿ ಇದರಲ್ಲಿದೆ.
ಗ್ರಾಮೀಣ ಪ್ರದೇಶಗಳ ಪುರುಷರು ಸರಾಸರಿ 554 ನಿಮಿಷಗಳನ್ನು, ಮಹಿಳೆಯರು 557 ನಿಮಿಷವನ್ನು ನಿದ್ರೆಯಲ್ಲಿ ಕಳೆಯುತ್ತಾರೆ. ನಗರದಲ್ಲಿ ಪುರುಷರು 534 ನಿಮಿಷಗಳನ್ನು, ಮಹಿಳೆಯರು 552 ನಿಮಿಷಗಳನ್ನು ನಿದ್ರೆಯಲ್ಲಿ ಕಳೆಯುತ್ತಾರೆ ಎಂದು ವರದಿ ಹೇಳಿದೆ.
ಗ್ರಾಮೀಣ ಭಾಗದ ಜನ ಊಟ – ತಿಂಡಿಗೆ ಸರಾಸರಿ 10 ನಿಮಿಷವನ್ನು, ಪುರುಷರು 94 ನಿಮಿಷವನ್ನು, ಮಹಿಳೆಯರು 101 ನಿಮಿಷಗಳನ್ನು ಶೌಚ ಕಾರ್ಯಗಳಿಗೆ ಬಳಸುತ್ತಾರೆ ಎಂದು ಸರ್ವೇ ಹೇಳಿದೆ.