ಬ್ರಿಟನ್ ಸರ್ಕಾರ ಕೋವಿಡ್ ವಿರುದ್ಧದ ಲಸಿಕೆ ಫೈಜರ್ ಬಳಕೆ ಅನುಮೋದನೇ ನೀಡಿದ ಬೆನ್ನಲ್ಲೇ ಯುಕೆ ಪ್ರವಾಸ ಕೈಗೊಳ್ಳಲು ವಿಚಾರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಭಾರತದಿಂದ ಬ್ರಿಟನ್ಗೆ ಪ್ರಯಾಣ ಬೆಳೆಸಿಲಿಚ್ಚಿಸುತ್ತಿರುವ ಅನೇಕರು ಟ್ರಾವೆಲ್ ಏಜೆಂಟ್ಗಳ ಬಳಿ ಕೊರೊನಾ ಲಸಿಕೆ ಬಗ್ಗೆ ವಿಚಾರಿಸುತ್ತಿದ್ದಾರಂತೆ.
ಈ ಲಸಿಕೆಯನ್ನೇ ಬಂಡವಾಳ ಮಾಡಿಕೊಂಡ ಟ್ರಾವೆಲ್ ಏಜೆಂಟ್ ಒಬ್ಬ ಭಾರತದಿಂದ ಬ್ರಿಟನ್ಗೆ ಮೂರು ರಾತ್ರಿಗಳ ಪ್ರವಾಸದ ಪ್ಯಾಕೇಜ್ನ್ನೂ ಘೋಷಣೆ ಮಾಡಿದ್ದಾನೆ.
ಇದರಿಂದ ಭಾರತೀಯರು ಬ್ರಿಟನ್ನಲ್ಲಿ ಉಳಿದುಕೊಂಡು ಲಸಿಕೆ ಪಡೆದುಕೊಂಡು ಬರಲಿ ಅನ್ನೋದು ಟ್ರಾವೆಲ್ ಏಜೆನ್ಸಿ ಪ್ಲಾನ್ ಆಗಿದೆ.
ಬ್ರಿಟನ್ ಸರ್ಕಾರ ಬುಧವಾರ ಫೈಜರ್ ಬಯೋಟೆಕ್ ಲಸಿಕೆಗೆ ಅನುಮೋದನೆ ನೀಡಿದೆ. ಮುಂದಿನ ವಾರದಿಂದ ಈ ಲಸಿಕೆ ಕೊರೊನಾ ಸೋಂಕಿತರಿಗೆ ನೀಡಲಾಗುತ್ತೆ. ಈ ಸುದ್ದಿ ಕೇಳಿದ ಭಾರತೀಯರು ಇದೀಗ ಬ್ರಿಟನ್ ಪ್ರವಾಸಕ್ಕೆ ಭಾರೀ ಆಸಕ್ತಿ ತೋರಿಸುತ್ತಿದ್ದಾರಂತೆ.