ನವದೆಹಲಿ: ಚೀನಾದ ಅಪ್ರಚೋದಿತ ದಾಳಿಗೆ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ.
ಈ ಘಟನೆಯ ಬಳಿಕ ಲಡಾಕ್ ಗಡಿಯಲ್ಲಿ ಸಾಕಷ್ಟು, ಆತಂಕದ ವಾತಾವರಣವಿದೆ.
ಚೀನಾದ ಕೃತ್ಯದಿಂದ ಕ್ರೋಧಿತರಾಗಿರುವ ಭಾರತೀಯರು ಪ್ರತೀಕಾರಕ್ಕೆ ಕಾಯುತ್ತಿದ್ದಾರೆ. ಈ ನಡುವೆ ಅತೀ ಹೆಚ್ಚು ಭಾರತೀಯರು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಲು ಆ ಬಗ್ಗೆ ಪ್ರಸಿದ್ಧ ಸರ್ಚ್ ಇಂಜಿನ್ ಗೂಗಲ್ ನಲ್ಲಿಹುಡುಕಾಟ ನಡೆಸಿದ್ದಾರೆ.
ಭಾರತದಲ್ಲಿ ಬಳಕೆಯಾಗುತ್ತಿರುವ ಚೀನಾ ಮೂಲದ ಆ್ಯಪ್ ಗಳು, ಚೀನಾ ಮೂಲದ ವಸ್ತುಗಳು, ಚೀನಾ ವಸ್ತುಗಳಿಗೆ ಪರ್ಯಾಯ ಎಂಬ ವಿಷಯಗಳ ಬಗ್ಗೆ ಹುಡುಕಾಟ ನಡೆದಿದೆ.
ಲಡಾಕ್ ವ್ಯಾಪ್ತಿಯಲ್ಲಿ ಜನತಾ ಸಾರ್ವಭೌಮತ್ವ ಘೋಷಿಸಿದಾಗಿನಿಂದಲೂ ಭಾರತ- ಚೀನಾ ಸಂಬಂಧ ಹಳಸಿದೆ. ಮಂಗಳವಾರ ಗಡಿಯಲ್ಲಿ ನಡೆದ ಎರಡೂ ಸೇನೆಗಳ ಕಾಳಗದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಚೀನಾದ ಸಾಕಷ್ಟು ಸೈನಿಕರು ಸತ್ತಿದ್ದು, ಸಂಖ್ಯೆಯನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ. ಕಳೆದ ತಿಂಗಳಿಂದ ಗಡಿಯಲ್ಲಿ ಎರಡೂ ರಾಷ್ಟ್ರಗಳ ನಡುವೆ ಬಿಕ್ಕಟ್ಟಿನ ಪರಿಸ್ಥಿತಿ ಎದುರಾದಾಗಿನಿಂದಲೂ ʼಬಾಯ್ ಕಾಟ್ ಚೀನಾ ಐಟಮ್ʼ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.