ಅಹಮದಾಬಾದ್ ನ ಮೊಟೆರಾ ಸ್ಟೇಡಿಯಂ ಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಟ್ಟ ಬಳಿಕ ಸ್ಪೈಡರ್ ಮ್ಯಾನ್ ಚಲನಚಿತ್ರದ ನಟನನ್ನು ಭಾರತೀಯರನೇಕರು ಟೀಕಿಸಲಾರಂಭಿಸಿದ್ದಾರೆ.
ಸ್ಟೇಡಿಯಂ ಮರುನಾಮಕರಣದ ವಿಚಾರಕ್ಕೆ ಅನೇಕ ಕಡೆ ಆಕ್ಷೇಪ ಕೇಳಿಬಂದಿದೆ. ಅದೇ ರೀತಿ ಬ್ರಿಟಿಷ್ ಲೇಖಕ ಹಾಗೂ ಕ್ರಿಕೆಟಿಗ ಟಾಮ್ ಹಾಲೆಂಡ್ ಕೂಡ ಮೋದಿಯನ್ನು ಟೀಕಿಸಿದ್ದಾರೆ.
ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಗೆ ತಮ್ಮ ಹೆಸರನ್ನೇ ಇಡಲು ಇಚ್ಛಿಸಿರುವ ಮೋದಿಗೆ ನಾನು ದೊಡ್ಡ ಅಭಿಮಾನಿಯಾಗಿದ್ದೇನೆ. ಇಂತಹ ನಡೆಯನ್ನು ಅನುಸರಿಸುವ ನಾಯಕರು ಯಾವಾಗಲೂ ದೇಶಕ್ಕೆ ಒಳ್ಳೆಯ ಸಂಕೇತವಲ್ಲ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
20 ವರ್ಷಗಳಿಂದ ದಿನ ಬಿಟ್ಟು ದಿನ ʼಬರ್ಗರ್ʼ ತಿನ್ನುತ್ತಿದ್ದಾನೆ ಭೂಪ
ಇದನ್ನು ಕಂಡು ಕೆಂಡಾಮಂಡಲರಾಗಿರುವ ಪ್ರಧಾನಿ ಮೋದಿಯ ಅಭಿಮಾನಿಗಳು, ಸ್ಪೈಡರ್ ಮ್ಯಾನ್ ಚಲನಚಿತ್ರದ ಕಥಾನಾಯಕ ಟಾಮ್ ಹಾಲೆಂಡ್ ಎಂದು ಗೊಂದಲ ಮಾಡಿಕೊಂಡು ಈತನ ಎಲ್ಲ ಸಿನಿಮಾಗಳನ್ನು ಬಹಿಷ್ಕರಿಸಲು ಕರೆ ನೀಡುತ್ತಿದ್ದಾರೆ. ಟಾಮ್ ಹಾಲೆಂಡ್ ಟ್ವೀಟ್ ಗಳನ್ನು ಇಟ್ಟುಕೊಂಡು ಹ್ಯಾಷ್ ಟ್ಯಾಗ್ ಮಾಡಿ ಕಿಡಿ ಕಾರಿದ್ದಾರೆ. ನಂತರ ಗೊತ್ತಾದದ್ದು ಸ್ಪೈಡರ್ ಮ್ಯಾನ್ ನಟ ಟಾಮ್ ಹಾಲೆಂಡ್ ಬೇರೆ, ಬ್ರಿಟಿಷ್ ಲೇಖಕನೇ ಬೇರೆ ಎಂಬುದು.