ಭೂಮಿಯಿಂದ ಚೆಂದವಾಗಿ ಕಾಣುವ ಚಂದಿರನ ಮೇಲೆ ಕಟ್ಟಡ ಕಟ್ಟಲು ತಯಾರಿ ನಡೆದಿದೆ.
ಭಾರತೀಯ ವಿಜ್ಞಾನ ಸಂಸ್ಥೆ ಐಐಎಸ್ಸಿ ಹಾಗೂ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ.
ಇದಕ್ಕಾಗಿ ಚಂದ್ರನ ಮೇಲ್ಮೈ ಮಣ್ಣು, ಬ್ಯಾಕ್ಟೀರಿಯಾ, ಜವಳಿ (ಗೋರಿ) ಕಾಯಿ, ಮನುಷ್ಯನ ಮೂತ್ರ ಬಳಸಿ ಇಟ್ಟಿಗೆ ತಯಾರಿಸುವ ಸಿದ್ಧತೆ ನಡೆದಿದ್ದು, ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಭಾರ ತಡೆಯುವ ಸಾಮರ್ಥ್ಯ ಒದಗಿಸಲೂ ಸಂಶೋಧನೆ ನಡೆಸಲಾಗುತ್ತದೆ.
ಭೂಮಿಯಿಂದ ಪ್ರತಿ ಪೌಂಡ್ ಕಚ್ಚಾ ಸಾಮಗ್ರಿಗಳನ್ನು ಚಂದ್ರನಲ್ಲಿಗೆ ರವಾನಿಸಲು 7.5 ಲಕ್ಷ ರೂ. ಖರ್ಚಾಗಲಿದ್ದು, ಇದನ್ನು ಬಳಸಿ ತಯಾರಿಸಿದ ಇಟ್ಟಿಗೆಗಳಿಂದ ಗೋಡೆ ಕಟ್ಟಿ, ಮನೆ ನಿರ್ಮಿಸಲಾಗುತ್ತದೆ.