ನವದೆಹಲಿ: ಭಾರತೀಯ ರೈಲ್ವೆ ಟ್ರಾಫಿಕ್ ವಿಭಾಗದ ಅಧಿಕಾರಿ ಶಶಿಕಾಂತ ಕೊರಾವತ್ ಎಂಬುವವರು ಪರಿಸರ ಸ್ನೇಹಿ ಮದುವೆ ಕಾರ್ಡ್ ಒಂದನ್ನು ಸಿದ್ಧಪಡಿಸಿದ್ದಾರೆ. ಇದನ್ನು ಮಣ್ಣಿನಲ್ಲಿ ಬಿತ್ತಿ ಗಿಡ ಬೆಳೆಯಬಹುದು.
ರೈಲ್ವೆ ಅಧಿಕಾರಿ ಮದುವೆ ಕಾರ್ಡ್ ಗಳನ್ನು ಸೈಬರಾಬಾದ್ ಪೊಲೀಸ್ ಕಮೀಷನರ್ ವಿ.ಸಿ.ಸಜ್ಜನರ್ ಅವರಿಗೆ ನೀಡಿದ್ದಾರೆ. ಪೊಲೀಸ್ ಆಯುಕ್ತಾಲಯದ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಇದರ ಫೋಟೋ ಹಾಕಿ ವಿವರ ನೀಡಲಾಗಿದೆ. ಈ ಮದುವೆ ಕಾರ್ಡ್ ನ್ನು ಚೂರು ಮಾಡಿ ನಾಟಿ ಮಾಡಿ ಮೂರು ರೀತಿಯ ಹೂವಿನ ಗಿಡ ಬೆಳೆಯಬಹುದು. ಎನ್ವಲಪ್ ಕವರ್ ನಿಂದ ಮೂರು ರೀತಿಯ ತರಕಾರಿ ಗಿಡ ಬೆಳೆಯಬಹುದು.
ನವೆಂಬರ್ 28 ರಂದು ಶಶಿಕಾಂತ ಅವರ ವಿವಾಹ ಹೈದ್ರಾಬಾದ್ ನಲ್ಲಿ ನಡೆಯಲಿದೆ. “ಕಾಗದದಿಂದ ತಯಾರಿಸುವ ಆಮಂತ್ರಣ ಪತ್ರಿಕೆಗಳನ್ನು ಸುಟ್ಟರೆ ಪರಿಸರಕ್ಕೆ ಪರಿಣಾಮ ಉಂಟಾಗುತ್ತದೆ. ಇದರಿಂದ ಈ ರೀತಿ ವ್ಯವಸ್ಥೆ ಮಾಡಲಾಗಿದೆ” ಎಂದು ಅವರು ಹೇಳಿಕೊಂಡಿದ್ದಾರೆ. “ಶಶಿಕಾಂತ ಇತರರಿಗೆ ಮಾದರಿ” ಎಂದು ಕಮೀಷನ್ ಸಜ್ಜನರ್ ಹೇಳಿದ್ದಾರೆ.