ಕೋವಿಡ್-19 ಸೋಂಕಿಗೆ ಕೊಡಲಾಗುತ್ತಿರುವ ವೈದ್ಯಕೀಯ ಶುಶ್ರೂಷೆ ಕುರಿತಂತೆ ಜನರಲ್ಲಿ ಅಪನಂಬಿಕೆ ಹುಟ್ಟಿಸುತ್ತಿದ್ದಾರೆ ಎಂದು ಆರೋಪಿಸಿ ಯೋಗ ಗುರು ಬಾಬಾ ರಾಮ್‌ದೇವ್ ಹಾಗೂ ಅವರ ಸಹಯೋಗಿ ಆಚಾರ್ಯ ಬಾಲಕೃಷ್ಣ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಉಪಾಧ್ಯಕ್ಷ ಡಾ. ನವಜೋತ್ ಸಿಂಗ್ ದಹಿಯಾ ಜಲಂಧರ್ ಪೊಲೀಸ್ ಆಯುಕ್ತರ ಬಳಿ ದೂರು ಸಲ್ಲಿಸಿದ್ದಾರೆ.
ಉದ್ದೇಶಪೂರಿತವಾಗಿ ರಾಮ್‌ದೇವ್ ಅವರು ವೈದ್ಯರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದು, ಜನರು ಅವರಿಂದ ಚಿಕಿತ್ಸೆ ಪಡೆಯಬಾರದು ಎಂದು ಹೇಳುವ ಮೂಲಕ ಕೋವಿಡ್-19 ಸೋಂಕಿತರಿಗೆ ಕೊಡುವ ಚಿಕಿತ್ಸೆ ಸಂಬಂಧ ನಿರ್ದೇಶನಗಳನ್ನೇ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ದಹಿಯಾ ಆಪಾದನೆ ಮಾಡಿದ್ದಾರೆ.
ಆಸ್ತಿ ಖರೀದಿ, ಮಾರಾಟಗಾರರಿಗೆ ಮುಖ್ಯ ಮಾಹಿತಿ: ರಾಜ್ಯಾದ್ಯಂತ ನೋಂದಣಿ ಕಚೇರಿ ಸ್ಥಗಿತಗೊಳಿಸಿ ಸರ್ಕಾರದ ಆದೇಶ
ರಾಮ್‌ದೇವ್ ವಿರುದ್ಧ ಉನ್ನತ ಹಂತದ ತನಿಖೆಗೆ ಆದೇಶ ಕೊಟ್ಟು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಜರುಗಿಸಬೇಕೆಂದು ದಹಿಯಾ ಆಗ್ರಹಿಸಿದ್ದಾರೆ.
ಕೋವಿಡ್-19 ಸೋಂಕು ಕಂಡುಬಂದಲ್ಲಿ ಆಸ್ಪತ್ರೆಗಳಿಗೆ ಹೋಗುವ ಬದಲಿಗೆ ಮನೆಗಳಲ್ಲೇ ಇದ್ದುಕೊಂಡು ಖುದ್ದು ತಾವುಗಳೇ ರೋಗಲಕ್ಷಣಗಳಿಗೆ ಚಿಕಿತ್ಸೆ ಪಡೆಯಬೇಕು ಎನ್ನುವ ಮೂಲಕ ರಾಮ್‌ದೇವ್ ಅವರು ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ವಿಡಿಯೋ ಕ್ಲಿಪ್‌ಗಳನ್ನು ಸಾಕ್ಷಿ ಕೊಟ್ಟು ದಹಿಯಾ ಆಪಾದನೆ ಮಾಡಿದ್ದಾರೆ.