alex Certify ಚರ್ಮದ‌ ಬಣ್ಣದ ಫಿಲ್ಟರ್ ತೆಗೆದ ಮ್ಯಾಟ್ರಿಮೋನಿ ಸಂಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಮದ‌ ಬಣ್ಣದ ಫಿಲ್ಟರ್ ತೆಗೆದ ಮ್ಯಾಟ್ರಿಮೋನಿ ಸಂಸ್ಥೆ

Indian Matrimonial Website Removes Skin Tone Filter Amid Raging ...

ಅಮೆರಿಕದಲ್ಲಿ ಕಪ್ಪು‌ ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ ನಡೆದ‌ ಹಲ್ಲೆ ಹಾಗೂ ಹತ್ಯೆ ಬಳಿಕ ಇದೀಗ ಎಲ್ಲೆಡೆ ವರ್ಣ ಬೇಧ ನೀತಿಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆಯೂ ಆಗಿದೆ.

ಹೌದು, ವಧು – ವರರ ಅನ್ವೇಷಣಾ ವೇದಿಕೆಯಾಗಿರುವ ಶಾದಿ.ಕಾಮ್‌ನಲ್ಲಿ ಚರ್ಮದ ಬಣ್ಣದ ‌ಆಯ್ಕೆಯ ಬಗ್ಗೆ ಇದ್ದ ಫಿಲ್ಟರ್ ನ್ನು ತೆಗೆದಿರುವುದಾಗಿ ಹೇಳುವ ಮೂಲಕ‌ ವರ್ಣಬೇಧ ನೀತಿಯ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಲಾಗಿದೆ.

ಇದಕ್ಕೂ ಮೊದಲು ಈ ಫಿಲ್ಟರ್‌ ವಿಷಯದಲ್ಲಿ ಪುಣೆ ಮೂಲದ‌ ಯುವತಿಯೊಬ್ಬರು ಧ್ವನಿ ಎತ್ತಿದ್ದರು. ಈ ರೀತಿ ಚರ್ಮದ ಬಣ್ಣದ ಬಗ್ಗೆ ಫಿಲ್ಟರ್ ಇಡುವ ಮೂಲಕ ವರ್ಣಬೇಧಕ್ಕೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂದು ಆನ್‌ಲೈನ್ ಅಭಿಯಾನ ಆರಂಭಿಸಿದ್ದರು. ಇದರ ಬೆನ್ನಲೇ ಶಾದಿ.ಕಾಮ್ ಈ ನಿರ್ಧಾರಕ್ಕೆ ಬಂದಿದೆ.

ಈಗಾಗಲೇ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಸೇರಿದಂತೆ ಅನೇಕ ಸಂಸ್ಥೆಗಳು ವರ್ಣಬೇಧ ಸಾರುವಂತಹ ಉತ್ಪನ್ನವನ್ನು ನಿಲ್ಲಿಸುವುದಾಗಿ ಪ್ರಕಟಿಸಿದೆ. ಇದೀಗ ಇದಕ್ಕೆ ಶಾದಿ.ಕಾಮ್ ಹೊಸ ಸೇರ್ಪಡೆಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...