ಈ ಸಂಸ್ಥೆ ಸಿದ್ಧಪಡಿಸಿರುವ ಬಟ್ಟೆಯನ್ನು ತೊಟ್ಟುಕೊಂಡರೆ ಸಾಕು ಕೊರೋನಾ ವೈರಾಣು ಓಡಿ ಹೋಗುತ್ತದೆ.
ಅರೆ, ಇದೇನಿದು? ಇದೆಲ್ಲ ಹೇಗೆ ಸಾಧ್ಯ? ಕೊರೋನಾ ವೈರಾಣು ಕೊಲ್ಲಲು, ಅದರ ವಿರುದ್ಧ ಹೋರಾಡಲು ವಿಜ್ಞಾನಿಗಳಿನ್ನೂ ಚುಚ್ಚುಮುದ್ದು, ಲಸಿಕೆ, ಔಷಧಿ ಮಾತ್ರೆ ಕಂಡು ಹಿಡಿಯುವುದರಲ್ಲಿ ಬ್ಯುಸಿ ಆಗಿದ್ದಾರೆ.
ಆದರೆ, ತಾವು ಸಿದ್ಧಪಡಿಸಿರುವ ಬಟ್ಟೆಯು ಕೊರೋನಾ ವೈರಾಣು ವಿರುದ್ಧ ಹೋರಾಡಲಿದೆ ಎಂದು ಡೋನಿಯರ್ ಎಂಬ ಸಂಸ್ಥೆಯ ಎಂಡಿ ರಾಜೇಂದ್ರ ಅಗರ್ವಾಲ್ ಹೆಮ್ಮೆಯಿಂದ ಹೇಳುತ್ತಾರೆ.
ಬೆಳ್ಳಿಯ ಕಣಗಳನ್ನು ಇದಕ್ಕೆ ಬಳಸಿದ್ದು, ವೈಜ್ಞಾನಿಕ ಪ್ರಯೋಗಗಳಿಂದ ಸಾಬೀತಾಗಿದೆ. ಮೆಲ್ಬೋರ್ನ್ ನಲ್ಲಿ ಇದರ ಪ್ರಯೋಗ ಯಶಸ್ವಿಯಾಗಿದೆ. ಸಾರ್ಸ್ ವೈರಾಣು ವಿರುದ್ಧ ಪ್ರಯೋಗಿಸಿದ್ದಾಗ ಯಶಸ್ವಿಯಾಗಿದೆ. ಈ ನೂತನ ತಂತ್ರಜ್ಞಾನದಿಂದ ಮಾಸ್ಕ್, ಗ್ಲೌಸ್ ಸೇರಿದಂತೆ ಎಲ್ಲ ಬಗೆಯ ಬಟ್ಟೆಗಳನ್ನು ತಯಾರಿಸಿ ಕೊಡಲು ಸಿದ್ಧ ಎಂದೂ ಹೇಳಿದ್ದಾರೆ.