
ಕೇವಲ ಬೆರಳಚ್ಚಿನ ನೆರವಿನಿಂದಲೇ ಇಬ್ಬರು ವ್ಯಕ್ತಿಗಳ ನಡುವೆ ಕಾರ್ಡ್/ಸ್ಮಾರ್ಟ್‌ಫೋನ್, ರೀಡರ್ ಅಥವಾ ಸ್ಕ್ಯಾನರ್‌ಗಳ ಮೂಲಕ ಮಾಹಿತಿ ರವಾನೆ ಮಾಡುವ ಆವಿಷ್ಕಾರವನ್ನು ಅಮೆರಿಕದಲ್ಲಿರುವ ಭಾರತ ಮೂಲದ ಸಂಶೋಧಕರು ಕಂಡು ಹಿಡಿದಿದ್ದಾರೆ.
ಇಂಜಿನಿಯರ್‌ಗಳು ಹಾಗೂ ಸಂಶೋಧಕರು ಸೇರಿಕೊಂಡು ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನದ ಪ್ರೋಟೋಟೈಪ್ ನಿಂದ ಕೇವಲ ಬೆರಳಚ್ಚಿನ ಮೂಲಕ ನೇರವಾಗಿ ಮಾಹಿತಿ ರವಾನೆ ಮಾಡಬಹುದಾಗಿದೆ. ಸದ್ಯಕ್ಕೆ ಈ ತಂತ್ರಜ್ಞಾನದ ಮೂಲಕ ಹಣ ಕಳುಹಿಸಲು ಸಾಧ್ಯವಿಲ್ಲ.
ದೇಹಗಳಿಂದ ಉಗಮಿಸುವ ಬ್ಲೂಟೂತ್ ಸಿಗ್ನಲ್‌ಗಳನ್ನು ಈ ಡಿವೈಸ್‌ಗಳು ಬಳಸುತ್ತವೆ. ಈ ಸಿಗ್ನಲ್‌ಗಳನ್ನು 30 ಅಡಿ ದೂರದಲ್ಲಿರುವ ವ್ಯಕ್ತಿ ಸ್ವೀಕರಿಸಬಹುದಾಗಿದೆ.