alex Certify ಬಿಗ್ ನ್ಯೂಸ್: ಮುಂದಿನ ವರ್ಷದ ಆರಂಭದಲ್ಲೇ ಕೊರೊನಾ ಲಸಿಕೆ..!? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಮುಂದಿನ ವರ್ಷದ ಆರಂಭದಲ್ಲೇ ಕೊರೊನಾ ಲಸಿಕೆ..!?

ಕೊರೊನಾ ವಿರುದ್ಧ ಲಸಿಕೆಗೆ ವಿಶ್ವದ ಅನೇಕ ರಾಷ್ಟ್ರಗಳು ಸಂಶೋಧನೆ ನಡೆಸುತ್ತಿವೆ. ಈಗಾಗಲೇ ಅನೇಕ ಲಸಿಕೆಗಳು ಕ್ಲಿನಿಕಲ್​ ಟ್ರಯಲ್​​ನಲ್ಲಿ ಯಶಸ್ಸನ್ನ ಗಳಿಸ್ತಾ ಇದ್ದು ಭರವಸೆ ಮೂಡಿಸಿವೆ. ಈ ನಡುವೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​​ ಮುಂದಿನ ವರ್ಷದ ಆರಂಭದಲ್ಲೇ ಕೊರೊನಾಗೊಂದು ಲಸಿಕೆ ಸಿಗೋ ಸಾಧ್ಯತೆ ದಟ್ಟವಾಗಿದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಚಿವರುಗಳ ಜೊತೆ ನಡೆದ ಸಭೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಹರ್ಷವರ್ಧನ್​, ಮುಂದಿನ ವರ್ಷದೊಳಗಾಗಿ ಒಂದಕ್ಕಿಂತ ಅಧಿಕ ಮೂಲಗಳಿಂದ ಕೊರೊನಾಗೆ ವ್ಯಾಕ್ಸಿನ್​ ಸಿಗುವ ಸಾಧ್ಯತೆ ಇದೆ. ಹೀಗಾಗಿ ನಮ್ಮ ತಜ್ಞರ ಗುಂಪು ಈ ಲಸಿಕೆಯನ್ನ ಹೇಗೆ ಪೂರೈಕೆ ಮಾಡಬೇಕು ಅನ್ನೋದ್ರ ಬಗ್ಗೆ ಈಗಲೇ ಅಧ್ಯಯನ ನಡೆಸುತ್ತಿದ್ದಾರೆ ಅಂತಾ ಹೇಳಿದ್ರು.

ಇದೇ ವೇಳೆ ದೇಶದ ಜನತೆ ಉದ್ದೇಶಿಸಿ ಮಾತನಾಡಿದ ಅವ್ರು ಹೆಚ್ಚು ಜನದಟ್ಟಣೆ ಇರುವ ಸ್ಥಳಗಳಲ್ಲಿ ಇರಲೇಬೇಡಿ. ಸರ್ಕಾರ, ಮುಂದೆ ಬರುವ ಹಬ್ಬಗಳನ್ನ ಗಮನದಲ್ಲಿಟ್ಟು ಮಾರ್ಗಸೂಚಿಯನ್ನ ಹೊರಡಿಸಿದೆ. ಕೊರೊನಾ ನಿಯಂತ್ರಣಕ್ಕಾಗಿ ಈ ಮಾರ್ಗಸೂಚಿಯನ್ನ ಪಾಲಿಸೋದು ದೇಶದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ. ಅಲ್ಲದೇ ಇನ್ನೇನು ಚಳಿಗಾಲ ಆರಂಭವಾಗಲಿದೆ. ಚಳಿ ಇದ್ದಲ್ಲಿ ಕೊರೊನಾ ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ ಜನತೆ ಆದಷ್ಟು ಎಚ್ಚರದಿಂದ ಇರಬೇಕು ಅಂತಾ ಮಾಹಿತಿ ನೀಡಿದ್ರು.

ಭಾರತದಲ್ಲಿ ಪ್ರಸ್ತುತ 2 ಡೋಸ್​ ಹಾಗೂ 3 ಡೋಸ್​​ ಕೊರೊನಾ ಲಸಿಕೆಗಳು ಪ್ರಯೋಗ ಹಂತದಲ್ಲಿದೆ. ಭಾರತ್​ ಬಯೋಟೆಕ್​​ ಹಾಗೂ ಸೆರಮ್​ ಇನ್ಸಿಟ್ಯೂಟ್​​​ ಆಫ್​ ಇಂಡಿಯಾಗೆ 2 ಡೋಸ್​ ಅವಶ್ಯಕತೆ ಇದ್ದರೆ ಕಾರ್ಡಿತಾ ಹೆಲ್ತ್​ಕೇರ್​ ವ್ಯಾಕ್ಸಿನ್​ಗೆ ಮೂರು ಡೋಸ್​ ಅವಶ್ಯಕತೆ ಇದೆ. ಇನ್ನುಳಿದಂತೆ ಉಳಿದ ಲಸಿಕೆಗಳು ಪ್ರಾಥಮಿಕ ಹಂತದ ಪ್ರಯೋಗದಲ್ಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...