alex Certify ಈ ವಿಚಾರದಲ್ಲಿ ಅಮೆರಿಕವನ್ನೇ ಹಿಂದಿಕ್ಕಿ ವಿಶ್ವದಲ್ಲಿ ಮೊದಲ ಸ್ಥಾನ ಪಡೆದ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಚಾರದಲ್ಲಿ ಅಮೆರಿಕವನ್ನೇ ಹಿಂದಿಕ್ಕಿ ವಿಶ್ವದಲ್ಲಿ ಮೊದಲ ಸ್ಥಾನ ಪಡೆದ ಭಾರತ

ಕೊರೊನಾ ವೈರಸ್​ ಕಳೆದ ವರ್ಷ ಇಡೀ ವಿಶ್ವಕ್ಕೆ ಭಾದಿಸಿದ ಬಳಿಕ ಜನಜೀವನವೇ ಬದಲಾಗಿದೆ. ಇದೀಗ ಮಾರಕ ವೈರಸ್​ ವಿರುದ್ಧ ಲಸಿಕೆಯ ಯುದ್ಧ ನಡೆಯುತ್ತಿದೆ. ಈ ಲಸಿಕೆ ಹಂಚಿಕೆ ವಿಚಾರದಲ್ಲಿ ಅಮೆರಿಕವನ್ನೂ ಹಿಂದಿಕ್ಕಿರುವ ಭಾರತ ವಿಶ್ವದಲ್ಲೇ ಅತಿ ಹೆಚ್ಚು ವೇಗದಲ್ಲಿ ಲಸಿಕೆ ನೀಡುತ್ತಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಅಂತಾ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಪ್ರತಿದಿನ ಸರಾಸರಿ 30,93,861 ಮಂದಿಗೆ ಕೊರೊನಾ ಲಸಿಕೆಯನ್ನ ನೀಡಲಾಗುತ್ತಿದೆ ಇಲ್ಲಿಯವರೆಗೆ ಲಸಿಕೆ ಪಡೆದವರ ಸಂಖ್ಯೆ 8.70 ಕೋಟಿ ದಾಟಿದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ.

ತಾತ್ಕಾಲಿಕ ವರದಿ ಪ್ರಕಾರ ಇಂದು ಬೆಳಗ್ಗೆ 7 ಗಂಟೆಯವರೆಗೆ 8,70,77,474 ಲಸಿಕೆಯನ್ನ ನೀಡಲಾಗಿದೆ. ಇದರಲ್ಲಿ 89,63,724 ಆರೋಗ್ಯ ಕಾರ್ಯಕರ್ತರು 1ನೇ ಡೋಸ್​ ಪಡೆದಿದ್ದರೆ 53,94,913 ಆರೋಗ್ಯ ಕಾರ್ಯಕರ್ತರು ಎರಡು ಡೋಸ್​ಗಳನ್ನ ಪಡೆದಿದ್ದಾರೆ. ಮುಂಚೂಣಿ ಸಿಬ್ಬಂದಿಯಲ್ಲಿ 97,36,629 ಮಂದಿ ಮೊದಲನೇ ಡೋಸ್​ ಹಾಗೂ 43,12,826 ಮಂದಿ 2 ಡೋಸ್​ಗಳನ್ನ ಪೂರ್ಣಗೊಳಿಸಿದ್ದಾರೆ. ಇನ್ನು 60 ವರ್ಷ ಮೇಲ್ಪಟ್ಟವರಲ್ಲಿ 2,18,60,709 ಮಂದಿ ಮೊದಲ ಡೋಸ್​ ಹಾಗೂ 45 ರಿಂದ 60 ವರ್ಷ ಮೇಲ್ಪಟ್ಟ 4,31,933 ಮಂದಿ ಎರಡೂ ಡೋಸ್​ಗಳನ್ನ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...