SHOCKING NEWS: ಭಾರತದ ನಕ್ಷೆಯಲ್ಲಿ ಜಮ್ಮು-ಕಾಶ್ಮೀರವನ್ನೇ ಕೈಬಿಟ್ಟ ವಿಶ್ವ ಆರೋಗ್ಯ ಸಂಸ್ಥೆ 15-01-2021 11:53AM IST / No Comments / Posted In: Latest News, India ಭಾರತದಿಂದ ಜಮ್ಮು & ಕಾಶ್ಮೀರ ಹಾಗೂ ಲಡಾಖ್ ಪ್ರತ್ಯೇಕವಾಗಿರುವಂತಹ ನಕ್ಷೆಯನ್ನ ತೋರಿಸುವ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ವಿಶ್ವದಲ್ಲಿ ಕೊರೊನಾ ವೈರಸ್ ಪ್ರಮಾಣವನ್ನ ತೋರಿಸುವ ನಕ್ಷೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಪ್ರಮಾದವೆಸಗಿದೆ. ಈ ವಿಚಾರವಾಗಿ ಜೀನಿವಾದಲ್ಲಿ ವಿಶ್ವ ಸಂಸ್ಥೆಯ ಭಾರತೀಯ ರಾಯಭಾರಿ ಇಂದ್ರಮಣಿ ಪಾಂಡೆ ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಜೊತೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪಾಂಡೆ ಭಾರತದ ಗಡಿಗಳನ್ನ ತಪ್ಪಾಗಿ ತೋರಿಸಿದ್ದು ಸರಿಯಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ನಕ್ಷೆಯನ್ನ ಸರಿಪಡಿಸಲು ಒಂದು ತಿಂಗಳಲ್ಲಿ ಮೂರನೇ ಬಾರಿ ಭಾರತ ಹೇಳುತ್ತಿದ್ದರೂ ಸಹ ಡಬ್ಲೂ ಹೆಚ್ ಓ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.