ಲಡಾಖ್ ಗಡಿ ವಿಚಾರದಲ್ಲಿ ಚೀನಾ ನೀಡಿರುವ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯ, ಭಾರತದ ಆಂತರಿಕ ವಿಚಾರದಲ್ಲಿ ಚೀನಾ ಮೂಗು ತೂರಿಸುವ ಅವಶ್ಯಕತೆ ಇಲ್ಲ. ಜಮ್ಮು , ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳು ಈ ಹಿಂದೆಯೂ ಭಾರತಕ್ಕೆ ಸೇರಿದ ಪ್ರದೇಶವಾಗಿವೆ. ಮುಂದೆಯೂ ಭಾರತಕ್ಕೇ ಸೇರಿದ ಪ್ರದೇಶಗಳಾಗಿ ಇರಲಿವೆ ಅಂತಾ ಎಚ್ಚರಿಕೆ ನೀಡಿವೆ.
ಈ ವಿಚಾರವಾಗಿ ಮಾತನಾಡಿದ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಕಶ್ಯಪ್, ಅರುಣಾಚಲ ಪ್ರದೇಶ ವಿಚಾರವಾಗಿಯೂ ಸಾಕಷ್ಟು ಬಾರಿ ಚೀನಾಗೆ ಸ್ಪಷ್ಟನೆ ನೀಡಿದ್ದೇವೆ. ಅರುಣಾಚಲ ಪ್ರದೇಶ ಭಾರತಕ್ಕೆ ಭಾಗವಾಗಿದೆ. ಹೀಗಾಗಿ ಚೀನಾ ಈ ವಿಚಾರಗಳಲ್ಲಿ ಮಧ್ಯ ಪ್ರವೇಶಿಸುವ ಅಗತ್ಯತೆ ನಮಗಿಲ್ಲ ಅಂತಾ ವಾರ್ನಿಂಗ್ ನೀಡಿದ್ದಾರೆ.