ದೇಶದಲ್ಲಿ ಕೊರೊನಾ ಎರಡನೇ ಅಲೆ ರಣಕೇಕೆ ಜೋರಾಗಿದ್ದು ಮುಂದಿನ ದಿನಗಳಲ್ಲಿ ನಿತ್ಯ ಸರಾಸರಿ 1750 ಮಂದಿ ಕೊರೊನಾದಿಂದ ಸಾವಿಗೀಡಾಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಜೂನ್ನಲ್ಲಿ ಈ ಪ್ರಮಾಣ 2320ರಷ್ಟಿತ್ತು ಎಂದು ದೇಶದ ಲಾನ್ಸೆಟ್ ಕೋವಿಡ್ 19 ಕಮಿಷನ್ ಹೇಳಿದೆ.
ಎರಡನೇ ಕೊರೊನಾ ಅಲೆ ನಿರ್ವಹಣೆ : ತುರ್ತು ಕ್ರಮಗಳು ಎಂಬ ಹೆಸರಿನ ಈ ವರದಿಯಲ್ಲಿ ಕೊರೊನಾ ಎರಡನೇ ಅಲೆ ಬಗ್ಗೆ ವಿವರಣೆ ನೀಡಲಾಗಿದೆ. ಈ ವರದಿಯಲ್ಲಿ ಸೋಂಕಿನ ಪ್ರಮಾಣವನ್ನ ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.
ಕೊರೊನಾ ಎರಡನೇ ಅಲೆ ದೇಶದಲ್ಲಿ ಹೆಚ್ಚಾಗುತ್ತಲೇ ಇದ್ದು ಇನ್ನೇನು ಕೆಲವೇ ದಿನಗಳಲ್ಲಿ ಮೊದಲ ಅಲೆಯಷ್ಟೇ ಸಾವು ನೋವುಗಳನ್ನ ಈ ಅಲೆಯೂ ಹೊತ್ತು ತರಲಿದೆ ಎಂದು ಈ ವರದಿ ಹೇಳಿದೆ.
ದೇಶದಲ್ಲಿ ಕೊರೊನಾ ಎರಡನೇ ಅಲೆಯನ್ನು ಭೌಗೋಳಿಕವಾಗಿ ವಿಂಗಡಿಸಲಾಗುದೆ. ಮೊದಲನೆ ಅಲೆಗಿಂತ ಕೊರೊನಾ ಎರಡನೇ ಅಲೆ ವಿಭಿನ್ನವಾಗಿದೆ. ಹೊಸ ಕೊರೊನಾ ಕೇಸ್ಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ಫೆಬ್ರವರಿಯಿಂದ ಏಪ್ರಿಲ್ವರೆಗಿನ ಲೆಕ್ಕಾಚಾರದ ಪ್ರಕಾರ 10 ಸಾವಿರ ಕೇಸ್ನಿಂದ 80 ಸಾವಿರ ಕೇಸ್ ಏರಿಕೆಯಾಗಲು ಕೇವಲ 40 ದಿನಗಳ ಸಮಯ ತೆಗೆದುಕೊಂಡಿದೆ. ಆದರೆ ಸೆಪ್ಟೆಂಬರ್ನಲ್ಲಿ 83 ದಿನಗಳಲ್ಲಿ ಈ ಏರಿಕೆ ಕಂಡುಬಂದಿದೆ.
ಕೊರೊನಾ ಎರಡನೇ ಅಲೆಯಲ್ಲಿ ಸೌಮ್ಯ ಹಾಗೂ ಲಕ್ಷಣವೇ ಇಲ್ಲದ ಸೋಂಕಿತರ ಸಂಖ್ಯೆ ಹೆಚ್ಚಿದೆ. ಇದರಿಂದಾಗಿ ಸಾವಿನ ಪ್ರಮಾಣ ಹಾಗೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆ ಇದೆ.
ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷದಲ್ಲಿ ಸಾವಿನ ಪ್ರಮಾಣ ತುಂಬಾನೇ ಕಡಿಮೆಯಿದೆ. ಕಳೆದ ವರ್ಷ ಮಾರ್ಚ್ನಲ್ಲಿ ಸಿಎಫ್ಆರ್ 1.3 ಪ್ರತಿಶತವಿದ್ದರೆ ಈ ಬಾರಿ ಅಂದರೆ 2021ರಲ್ಲಿ ಇದು 0.87 ಪ್ರತಿಶತ ಆಗಿದೆ. ದೇಶದಲ್ಲಿ ಪ್ರತಿದಿನ ಸರಾಸರಿ 664 ಕೊರೊನಾ ಸಾವು ವರದಿಯಾಗ್ತಿದೆ.