ನವದೆಹಲಿ: ಕೋವಿಡ್ -19 ಲಸಿಕೆ ಪ್ರಯೋಗಗಳು ವೇಗವಾಗಿ ಮುಂದುವರೆಯುತ್ತಿದ್ದು, ಅನುಮೋದಿತ ಲಸಿಕೆ 2021 ರ ಮೊದಲ ತ್ರೈಮಾಸಿಕದಲ್ಲಿ ಭಾರತೀಯ ಮಾರುಕಟ್ಟೆಯನ್ನು ತಲುಪುವ ಸಾಧ್ಯತೆಯಿದೆ.
ಬರ್ನ್‌ಸ್ಟೈನ್ ವರದಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಜಾಗತಿಕವಾಗಿ 2020 ರ ಅಂತ್ಯದ ವೇಳೆಗೆ ನಾಲ್ಕು ಲಸಿಕೆಗಳು ಬರಲಿದ್ದು 2021ರ ಆರಂಭದಲ್ಲಿ ಅನುಮೋದನೆ ಪಡೆಯುವ ಸಾಧ್ಯತೆಯಿದೆ.
ಪಾಲುದಾರಿಕೆಗಳ ಮೂಲಕ ಭಾರತ ಕೊರೊನಾ ಸೋಂಕು ತಡೆ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಹಂತ ಒಂದು ಮತ್ತು ಎರಡರಲ್ಲಿ ಲಸಿಕೆ ಪ್ರಯೋಗ ಯಶಸ್ವಿಯಾಗಿದೆ. ಭಾರತದಲ್ಲಿ 2021ರ ಆರಂಭದ ವೇಳೆಗೆ ಮಾರುಕಟ್ಟೆಯಲ್ಲಿ ಲಸಿಕೆ ಇರುತ್ತದೆ ಎನ್ನುವ ಆಶಾವಾದಿಗಳಾಗಿದ್ದೇವೆ ಎಂದು ತಿಳಿಸಲಾಗಿದೆ.
ಲಸಿಕೆ ಪ್ರತಿ ಡೋಸೆಜ್ ಮೂರರಿಂದ ಆರು ಡಾಲರ್ಗೆ ಲಭ್ಯವಾಗಬಹುದು. ಪೋಲಿಯೋ ನಿರ್ಮೂಲನೆಗೆ ಕೈಗೊಂಡ ಅಭಿಯಾನದ ರೀತಿಯಲ್ಲಿ ಮತ್ತು ಇತ್ತೀಚೆಗೆ ನಡೆಸಿದ ಇಂದ್ರಧನುಷ್ ಮಾದರಿಯಲ್ಲಿ ಕೊರೋನಾ ತಡೆ ಲಸಿಕೆ ಅಭಿಯಾನ ಅನುಷ್ಠಾನ ಮಾಡಲಾಗುವುದು ಎಂದು ಹೇಳಲಾಗಿದೆ.