ಭಾರತದಲ್ಲಿ ಲೈಂಗಿಕತೆ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ನಾಚಿಕೆ ವಿಚಾರ. ಇನ್ನು ಸೆಕ್ಸ್ ಟಾಯ್ಸ್ ಬಗ್ಗೆ ಮುಕ್ತವಾಗಿ ಮಾತನಾಡಲು ಜನರು ಹಿಂಜರಿಯುತ್ತಾರೆ. ಭಾರತದಲ್ಲಿ ಸೆಕ್ಸ್ ಟಾಯ್ಸ್ ಖರೀದಿ ಮಾಡುವವರಿದ್ದಾರೆ. ಆದ್ರೆ ಇದನ್ನು ಗೌಪ್ಯವಾಗಿಡುತ್ತಾರೆ. ನಿಧಾನವಾಗಿ ಕಾಲ ಬದಲಾಗ್ತಿದ್ದು, ಆನ್ಲೈನ್ ನಲ್ಲಿ ಮಾರಾಟವಾಗ್ತಿದ್ದ ಸೆಕ್ಸ್ ಟಾಯ್ಸ್ ಗಳಿಗಾಗಿ ಅಂಗಡಿ ತೆರೆಯಲಾಗಿದೆ.
ಗೋವಾದ ಕಲಂಗುಟ್ ನಲ್ಲಿ ಸೆಕ್ಸ್ ಟಾಯ್ಸ್ ಅಂಗಡಿ ತೆರೆಯಲಾಗಿದೆ. ಸೆಕ್ಸ್ ಟಾಯ್ಸ್ ಮಾರಾಟ ಮಾಡ್ತಿರುವ ದೇಶದ ಮೊದಲ ಅಂಗಡಿ ಇದಾಗಿದೆ. ಈ ಅಂಗಡಿ ಹೆಸರು ಕಾಮಾ ಗಿಜ್ಮೋಸ್. ಈ ಅಂಗಡಿ ಮೂಲೆಯಲ್ಲಿಲ್ಲ. ಮಾರುಕಟ್ಟೆ ಮಧ್ಯದಲ್ಲಿಯೇ ಇದ್ದು, ಈ ಅಂಗಡಿಯಲ್ಲಿ ಸೆಕ್ಸ್ ಟಾಯ್, ಕಾಂಡೋಮ್, ಸ್ಪ್ರೇ, ಜೆಲ್, ವೈಬ್ರೇಟರ್, ಪ್ಯಾಕರ್ ಮತ್ತು ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಇದು ಮೆಡಿಕಲ್ ಶಾಪ್ ನಂತೆ ಕಾಣುತ್ತದೆ. ಅಂಗಡಿಯಲ್ಲಿ ಯಾವುದೇ ನಗ್ನತೆ ಮತ್ತು ಅಶ್ಲೀಲತೆಯನ್ನು ಪ್ರಚಾರ ಮಾಡಲಾಗ್ತಿಲ್ಲ.
ಭಾರತದಲ್ಲಿ ಇಂತಹ ಅಂಗಡಿಯ ಬಗ್ಗೆ ಕಾನೂನು ಸ್ಪಷ್ಟವಾಗಿಲ್ಲ. ಅಶ್ಲೀಲವಿಲ್ಲದೆ ಹೋದ್ರೆ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಆಟಿಕೆಗಳು ಮತ್ತು ಉತ್ಪನ್ನಗಳು ಇಲ್ಲಿವೆ. ಮಹಿಳೆಯರಿಗೆ ಯಾವುದೇ ರೀತಿಯಲ್ಲಿ ಅವಮಾನ ಮತ್ತು ಮುಜುಗರವಾಗುವುದಿಲ್ಲವೆಂದು ಅಂಗಡಿ ಮಾಲಿಕರು ಹೇಳಿದ್ದಾರೆ.