ಕೊರೊನಾ ವಿಷ್ಯದಲ್ಲಿ ಖುಷಿ ಸುದ್ದಿಯೊಂದು ಸಿಕ್ಕಿದೆ. ಇಷ್ಟು ದಿನ ಮೂಗು ಹಾಗೂ ಬಾಯಿಯೊಳಗೆ ಕೊರೊನಾ ಹೋಗದಂತೆ ತಡೆಯಲು ಮಾಸ್ಕ್ ನೆರವಾಗ್ತಾಯಿತ್ತು. ಆದ್ರೀಗ ಕೊರೊನಾ ವೈರಸ್ ಕೊಲ್ಲುವ ಮಾಸ್ಕ್ ಸಿದ್ಧವಾಗಿದೆ.
ಮುಂಬೈ ಸ್ಟಾರ್ಟ್ ಅಪ್ ಕಂಪನಿಯೊಂದು ಮಾಸ್ಕ್ ಸಿದ್ಧಪಡಿಸಿದೆ. ಮುಂಬೈ ಮೂಲದ ಸ್ಟಾರ್ಟ್ಅಪ್ ನ್ಯಾನೊ ತಂತ್ರಜ್ಞಾನವನ್ನು ಬಳಸಿಕೊಂಡು ಕೊರೊನಾ ವೈರಸ್ ಕಿಲ್ಲರ್ ಮಾಸ್ಕ್ ಅಭಿವೃದ್ಧಿಪಡಿಸಿದೆ. ವಿಶೇಷವೆಂದರೆ ಈ ಮಾಸ್ಕ್ ಕೊರೊನಾ ವೈರಸ್ ಕೊಲ್ಲುವ ಜೊತೆಗೆ ತೊಳೆಯಲು ಬರುತ್ತದೆ. ಇದನ್ನು 60-150 ಬಾರಿ ಬಳಸಬಹುದಾಗಿದೆ.
ಕೊರೊನಾ ಕೊಲ್ಲುವ ಮಾಸ್ಕ್ ಗೆ ಭಾರತೀಯ ಲ್ಯಾಬ್ಗಳು ಸೇರಿದಂತೆ ಅಮೇರಿಕನ್ ಲ್ಯಾಬ್ಗಳಿಂದ ಒಪ್ಪಿಗೆ ಸಿಕ್ಕಿದೆ. ಥರ್ಮಸ್ಸೆನ್ಸ್ ಸಿದ್ಧಪಡಿಸಿದ ಈ ಮಾಸ್ಕ್ ಮಾರುಕಟ್ಟೆಗೆ ಬಂದಾಗ ಅದ್ರ ಬೆಲೆ 300-500 ರೂಪಾಯಿ ಇರಬಹುದೆಂದು ಅಂದಾಜಿಸಲಾಗಿದೆ.