ಇನ್ನೇನು ಕೆಲವೇ ದಿನಗಳಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದ್ದು ಮತದಾರರನ್ನ ಸೆಳೆಯೋಕೆ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತನ್ನ ಮಾಡ್ತಿದ್ದಾರೆ. ಅದರಲ್ಲೂ ದರ್ಭಾಂಗ ಜಿಲ್ಲೆಯ ಸ್ವತಂತ್ರ ಅಭ್ಯರ್ಥಿಯೊಬ್ಬ ಎಮ್ಮೆ ಮೇಲೆ ಹತ್ತಿಕೊಂಡು ಬಂದು ನಾಮಪತ್ರ ಸಲ್ಲಿಸೋ ಮೂಲಕ ಜನರನ್ನ ಸೆಳೆಯೋಕೆ ಯತ್ನಿಸಿದ್ದಾರೆ.
ಬಹಾದುರಪುರ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ನಾಚಾರಿ ಮಂಡಲ್ ಎಮ್ಮೆ ಮೇಲೆ ಬಂದು ನಾಮಪತ್ರ ಸಲ್ಲಿಸಿ ಹೋಗಿದ್ದಾರೆ. ಯಾಕೆ ಈ ರೀತಿ ಮಾಡಿದ್ರಿ ಅಂತಾ ಕೇಳಿದ್ರೆ ನಾನು ಬಡವ ನನ್ನಲ್ಲಿ ವಾಹನವಿಲ್ಲ. ಹೀಗಾಗಿ ಎಮ್ಮೆ ಹತ್ತಿಕೊಂಡು ಬಂದಿದ್ದೇನೆ ಅಂತಾ ಹೇಳ್ತಾರೆ ನಾಚಾರಿ.
ಕ್ಷೇತ್ರದ ಹಾಲಿ ಶಾಸಕರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನ ಮಾಡದೇ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಮತದಾರರು ಈ ಬಾರಿ ನನ್ನ ಮೇಲೆ ಕೃಪೆ ತೋರಿಸುತ್ತಾರೆ ಎಂಬ ನಂಬಿಕೆ ಇದೆ. ಪ್ರಚಾರದ ವೇಳೆ ನಾನು ನೀಡಿರುವ ಎಲ್ಲ ಭರವಸೆಗಳನ್ನ ಪೂರ್ತಿ ಮಾಡುತ್ತೇನೆ ಅಂತಾ ನಾಚಾರಿ ಮಂಡಲ್ ಹೇಳಿದ್ರು.
ಬಿಹಾರದಲ್ಲಿ ಮೂರು ಸುತ್ತುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಕ್ಟೋಬರ್ 28, ನವೆಂಬರ್ 3 ಹಾಗೂ 7ನೇ ತಾರೀಖಿನಂದು ಮತದಾನ ನಡೆಯಲಿದೆ. ನವೆಂಬರ್ 10ರಂದು ಮತದಾನ ಎಣಿಕೆ ಕಾರ್ಯ ನಡೆಸಲಾಗುವುದು ಅಂತಾ ಚುನಾವಣಾ ಆಯೋಗ ತಿಳಿಸಿದೆ.