ಕೊರೋನಾ ಲಾಕ್‌ಡೌನ್ ಆರಂಭವಾದಾಗಿನಿಂದ ದಿನಕ್ಕೊಂದು ಅನ್ವೇಷಣೆಗಳನ್ನು ಜನ ನಡೆಸುತ್ತಲೇ ಇದ್ದಾರೆ. ಅದರಲ್ಲೂ ಇಲ್ಲೊಬ್ಬ ಶಿಕ್ಷಕಿ ಆನ್‌ಲೈನ್ ಕ್ಲಾಸ್‌ಗಾಗಿ ವಿಡಿಯೊ ಮಾಡಲು ಟ್ರೈಪಾಡ್ ಇಲ್ಲದಿರುವಾಗ ಮಾಡಿರುವ ಐಡಿಯಾ ಇದೀಗ ವೈರಲ್ ಆಗಿದೆ.
ಮಹಾರಾಷ್ಟ್ರದ ಪುಣೆಯ ಮೌಮಿತಾ ಎನ್ನುವ ಶಿಕ್ಷಕಿ ಆನ್‌ಲೈನ್ ಕ್ಲಾಸ್ ಮಾಡಲು ತಾನು ಪಡುತ್ತಿರುವ ಪ್ರಯತ್ನದ ಬಗ್ಗೆ ವಿಡಿಯೊವೊಂದನ್ನು ಮಾಡಿದ್ದಾರೆ.
ಅದರಲ್ಲಿ ಆಕೆಯ ಬಳಿ ಮೊಬೈಲ್ ಇಡಲು ಟ್ರೈಪಾಡ್ ಇಲ್ಲದೇ ಇರುವುದರಿಂದ, ಬಟ್ಟೆಯ ಹ್ಯಾಂಗರ್ ನ್ನು ಬಳಸಿಕೊಂಡು ಮೊಬೈಲ್ ಇಟ್ಟಿರುವ ಬಗ್ಗೆ ತೋರಿಸಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ತನ್ನ ಬಳಿ ಟ್ರೈಪಾಡ್ ಇಲ್ಲದೇ ಇರುವುದರಿಂದ ಆನ್‌ಲೈನ್ ಕ್ಲಾಸ್ ನಡೆಸಲು ಮೊಬೈಲ್ ಇಡುವುದಕ್ಕೆ ಹ್ಯಾಂಗರ್ ಬಳಸಿರುವ ಬಗ್ಗೆ ಹೇಳಿದ್ದಾರೆ.
ಮೌಮಿತಾ ಮಕ್ಕಳಿಗೆ ರಸಾಯನ ಶಾಸ್ತ್ರವನ್ನು ಬೋಧಿಸುತ್ತಾರೆ. ಬಟ್ಟೆ ಹಾಗೂ ಹ್ಯಾಂಗರ್ ಸಹಾಯದಿಂದ ಬೋರ್ಡ್ ಸರಿಯಾಗಿ ಕಾಣುವ ರೀತಿ ಮೊಬೈಲ್ ನ್ನು ಇರಿಸಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಪಾಠ ಮಾಡುವುದರಲ್ಲಿ ಅವರಿಗೆ ಇರುವ ಶ್ರದ್ಧೆಯ ಬಗ್ಗೆ ಪ್ರಶಂಸೆಯ ಸುರಿಮಳೆ ಶುರುವಾಗಿದೆ.