alex Certify ಸರೀಸೃಪಗಳ ಓಡಾಟಕ್ಕೆ ವಿಶೇಷ ಸೇತುವೆ ನಿರ್ಮಾಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರೀಸೃಪಗಳ ಓಡಾಟಕ್ಕೆ ವಿಶೇಷ ಸೇತುವೆ ನಿರ್ಮಾಣ…!

ವನ್ಯಜೀವಿಗಳ ರಕ್ಷಣೆಗೆ ಮುಂದಾಗಿರುವ ಉತ್ತಾರಖಂಡ ಅರಣ್ಯ ಇಲಾಖೆ ರಸ್ತೆ ಅಪಘಾತದಿಂದ ವನ್ಯಜೀವಿಗಳು ಸಾಯದಂತೆ ತಡೆಯುವ ಸಲುವಾಗಿ ನೈನಿತಾಲ್​ ಜಿಲ್ಲೆಯ ರಾಮನಗರ ಅರಣ್ಯ ವಿಭಾಗದಲ್ಲಿ ಪ್ರಾಣಿಗಳಿಗೆಂದೇ ವಿಶೇಷ ಪರಿಸರ ಸೇತುವೆಯನ್ನ ನಿರ್ಮಿಸಿಕೊಟ್ಟಿದೆ.‌

90 ಅಡಿ ಉದ್ದದ ಈ ಸೇತುವೆಯನ್ನ ಬಿದಿರು, ಸೆಣಬು ಹಾಗೂ ಹುಲ್ಲಿನಿಂದ ಮಾಡಲಾಗಿದೆ. ಕಲದುಂಗಿ – ನೈನಿತಾಲ್​ ಹೆದ್ದಾರಿಯಲ್ಲಿ ಕೇವಲ 10 ದಿನದಲ್ಲಿ ಈ ಸೇತುವೆ ತಲೆಯೆತ್ತಿದೆ.

5 ಅಡಿ ಅಗಲ ಹಾಗೂ 40 ಅಡಿ ಎತ್ತರದ ಈ ಸೇತುವೆ ನಿರ್ಮಾಣಕ್ಕೆ 2 ಲಕ್ಷ ರೂಪಾಯಿ ವ್ಯಯಿಸಲಾಗಿದೆ. ಇದು ಒಮ್ಮೆಲೆ ಮೂವರು ಮನುಷ್ಯರ ತೂಕವನ್ನ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಇಲ್ಲಿ ಹೆಚ್ಚಿನ ಸಂಖ್ಯೆಯ ವಾಹನ ಸಂಚರಿಸೋದ್ರಿಂದ ಇಲ್ಲಿನ ಸರಿಸೃಪಗಳು ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದವು. ಇದನ್ನ ತಪ್ಪಿಸುವ ಸಲುವಾಗಿ ಉತ್ತರಾಖಂಡ ಅರಣ್ಯ ಇಲಾಖೆ ಈ ಹೊಸ ಕ್ರಮ ಕೈಗೊಂಡಿದೆ. ಅಂದಹಾಗೆ ಈ ಸೇತುವೆ ಮೇಲೆ ಚಿರತೆಗಳೂ ಸಂಚರಿಸುತ್ತವೆ ಎಂದು ಅರಣ್ಯ ಇಲಾಖೆ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...