alex Certify ಹೈದರಾಬಾದ್ ನಲ್ಲಿ ತೇಜಸ್ವಿ ಸೂರ್ಯ ವರ್ಸಸ್ ಓವೈಸಿ ಜಟಾಪಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈದರಾಬಾದ್ ನಲ್ಲಿ ತೇಜಸ್ವಿ ಸೂರ್ಯ ವರ್ಸಸ್ ಓವೈಸಿ ಜಟಾಪಟಿ

ಗ್ರೇಟರ್ ಹೈದರಾಬಾದ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ವಿವಾದಿತ ರಾಜಕೀಯ ಮುಖಂಡ ಓವೈಸಿ ನಡುವಿನ ಜಟಾಪಟಿ ತಾರಕಕ್ಕೇರಿದೆ.

ಅವರಿಬ್ಬರ ಮಾತಿನ ಸಮರದಲ್ಲಿ ಹಳೆಯ ಘಟನೆಗಳು ತಳಕು ಹಾಕಿಕೊಂಡಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ನಡುವೆ 90ರ ದಶಕದಲ್ಲಿ ಪೈಪೋಟಿ ನಡೆದಿತ್ತು.

ಇದೀಗ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಮತ್ತು ಹೈದರಾಬಾದ್ ಪ್ರತಿನಿಧಿಸುವ ಓವೈಸಿ ನಡುವೆ ಮಾತಿನ ಚಕಮಕಿ ನಡೆದಿದೆ.

ಎಐಎಂಐಎಂ ಸಂಸದ ಆಧುನಿಕ ಕಾಲದ ಮಹಮದ್ ಅಲಿ ಜಿನ್ನಾ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಅವರು ಪಾಕಿಸ್ತಾನದ ಹೈದರಾಬಾದ್ ಮಾಡಲು ಹೊರಟಿದ್ದಾರೆ, ಅಷ್ಟೇ ಅಲ್ಲದೆ ಓಡಿಸಿ ಬಾಂಗ್ಲಾದೇಶಿ ರೋಹಿಂಗ್ಯ ಮತಗಳನ್ನು ಅವಲಂಬಿಸಿದ್ದಾರೆ ಎಂದು ಆಪಾದಿಸಿದ್ದಾರೆ.

ಇದಿಷ್ಟೇ ಅಲ್ಲದೆ, ನೀವು ಬಿಜೆಪಿಗೆ ನೀಡುವ ಪ್ರತಿಯೊಂದು ಮತವು ದೇಶವನ್ನು ಬಲಪಡಿಸಲು ಸಾಧ್ಯವಾಗುತ್ತದೆ. ನಿಮ್ಮ ಮತ ಭಾರತ ಮತ್ತು ಹಿಂದುತ್ವಕ್ಕೆ ನೀಡಿದ ಮತ ವಾಗಿರಲಿ. ನೀವು ನೀಡುವ ಮತವು ಭಾರತದ ವಿರುದ್ಧದ ಮತ ಆಗಬಾರದೆಂದು ಮತದಾರರಿಗೆ ಮನವಿ ಮಾಡಿದ್ದಾರೆ.

ಓವೈಸಿಗೂ ಸವಾಲ್ ಹಾಕಿರುವ ಅವರು, ಇದು ನಿಜಾಮರ ಸಮಯವಲ್ಲ, ಇದು ಹಿಂದೂ ಹೃದಯ ಸಾಮ್ರಾಟ್ ನರೇಂದ್ರ ಮೋದಿಯವರು ಸಮಯ. ಇಲ್ಲಿ‌ ನಿಮ್ಮಿಂದೇನೂ ಆಗದು ಎಂದು ಗುಡುಗಿದ್ದಾರೆ.

ಈ ಸವಾಲಿಗೆ ಪ್ರತಿಕ್ರಿಯಿಸಿರುವ ಓವೈಸಿ, 24ಗಂಟೆಯೊಳಗೆ ಅಕ್ರಮವಾಗಿ ನೆಲೆಸಿರುವ ಪಟ್ಟಿಯನ್ನು ನೀಡುವಂತೆ ಸವಾಲು ಹಾಕಿದ್ದಾರೆ. ಚುನಾವಣೆ ಮತದಾರರ ಪಟ್ಟಿಯಲ್ಲಿ 30000 ರೋಹಿಂಗ್ಯಾ ಗಳಿದ್ದರೆ ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ, ಮಲಗಿದ್ದಾರೆಯೇ ಇಂದು ವ್ಯಂಗ್ಯ ಮಾಡಿದ್ದಾರೆ.

ಬಿಜೆಪಿಯು ದೇಶದ ಏಕತೆಯನ್ನು ಮುರಿಯುತ್ತಿದೆ, ಅವರು ಮಸೀದಿಗಳನ್ನು ನಾಶಪಡಿಸಿದ್ದಾರೆ. ಆದರೆ ನಾವು ದೇವಸ್ಥಾನಕ್ಕಾಗಿ 10ಕೋಟಿ ಸಂಗ್ರಹಿಸುತ್ತಿದ್ದೇವೆ ಎಂದು ಹೈದರಾಬಾದ್‌ ‌ನ ಪ್ರಚಾರ ಸಭೆಯಲ್ಲಿ ಓವೈಸಿ ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...