ರಾಯಪುರ್: 1 ಕೆಜಿ ಸಗಣಿಗೆ ಒಂದೂವರೆ ರೂಪಾಯಿ ಕೊಟ್ಟು ಖರೀದಿಸಲು ಛತ್ತಿಸ್ ಘಡ ಸರ್ಕಾರ ಯೋಜನೆ ರೂಪಿಸಿದೆ. ಗ್ರಾಮೀಣ ಜನರು, ರೈತರ ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಎರೆಹುಳು ಗೊಬ್ಬರ ಉತ್ಪಾದನೆಗಾಗಿ ಹೊಸ ಯೋಜನೆಯನ್ನು ರೂಪಿಸಲಾಗಿದೆ.
ಛತ್ತಿಸ್ ಘಡ ಸರ್ಕಾರ ರೈತರಿಂದ ಪ್ರತಿ ಕೆಜಿಗೆ 1.50 ರೂಪಾಯಿ ದರದಲ್ಲಿ ಹಸು ಸಗಣಿ ಖರೀದಿಸಲಿದೆ. ಹರೇಲಿ ಹಬ್ಬದ ಅಂಗವಾಗಿ ಜುಲೈ 20 ರಂದು ಗೋವು ಧನ ನ್ಯಾಯ ಯೋಜನೆಯನ್ನು ಛತ್ತಿಸ್ ಘಡ ಸರ್ಕಾರ ಜಾರಿಗೆ ತರಲಿದ್ದು, ರೈತರ ಮನೆಗಳಿಂದ ಗೋವಿನ ಸಗಣಿ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ.
ಪ್ರತಿದಿನ ಸಾವಿರಾರು ಟನ್ ಗೋವಿನ ಸಗಣಿ ಉತ್ಪಾದನೆಯಾಗಲಿದ್ದು, ಇದರಿದ ರೈತರ ಆರ್ಥಿಕತೆ ಉತ್ತೇಜನವಾಗಲಿದ್ದು, ಗೊಬ್ಬರ ಉತ್ಪಾದನೆ ಆಗಲಿದೆ ಎಂದು ಹೇಳಲಾಗಿದೆ.