ರಷ್ಯಾದಿಂದ ಆಮದು ಮಾಡಿಕೊಳ್ಳಲಾದ ಕೊರೊನಾ ಲಸಿಕೆ ಸ್ಪುಟ್ನಿಕ್ ವಿ ಪ್ರತಿ ಶಾಟ್ಗೆ 995.40 ರೂಪಾಯಿ ವೆಚ್ಚವಾಗಲಿದೆ ಎಂದು ರಾ.ರೆಡ್ಡೀಸ್ ಔಷಧಾಲಯ ಘೋಷಣೆ ಮಾಡಿದೆ.
ಸ್ಪುಟ್ನಿಕ್ ವಿ ಲಸಿಕೆಯ ಪ್ರತಿ ಡೋಸ್ನ ಬೆಲೆ 948 ರೂಪಾಯಿ ಆಗಿದ್ದು ಇದಕ್ಕೆ 5 ಪ್ರತಿಶತ ಜಿಎಸ್ಟಿ ಮೊತ್ತವನ್ನ ಸೇರಿಸಿ 995.40 ರೂಪಾಯಿ ನಿಗದಿಯಾಗಿದೆ.
ಆದಾಗ್ಯೂ, ಭಾರತದಲ್ಲೇ ಲಸಿಕೆಯ ಡೋಸ್ಗಳನ್ನ ತಯಾರು ಮಾಡಿದ್ದಲ್ಲಿ ಈ ದರವು ಕಡಿಮೆಯಾಗಲಿದೆ ಎನ್ನಲಾಗಿದೆ.
ಸ್ಪುಟ್ನಿಕ್ ವಿ ಲಸಿಕೆಗಳು ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಕೊರೊನಾ ಲಸಿಕೆಗೆ ಅಭಾವ ಉಂಟಾಗಿರೋದ್ರ ಬೆನ್ನಲ್ಲೇ ಗುರುವಾರ ಕೇಂದ್ರ ಸರ್ಕಾರ ಈ ಮಾಹಿತಿಯನ್ನ ನೀಡಿತ್ತು.
ಮುಂದಿನ ವಾರದಿಂದ ಸ್ಪುಟ್ನಿಕ್ ವಿ ಲಸಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಘೋಷಣೆ ಮಾಡಲು ನನಗೆ ಖುಷಿ ಎನಿಸುತ್ತಿದೆ. ರಷ್ಯಾದಿಂದ ಬಂದಿರುವ ಸೀಮಿತ ಪೂರೈಕೆಯ ಲಸಿಕೆಗಳು ಮುಂದಿನ ವಾರದಿಂದ ಮಾರಾಟವಾಗಲಿದೆ ಎಂದು ಭಾವಿಸುತ್ತೇನೆ ಎಂದು ನೀತಿ ಆಯೋಗದ ವಿ.ಕೆ. ಪಾಲ್ ಮಾಹಿತಿ ನೀಡಿದ್ದರು.