ಕೋಯಿಕ್ಕೋಡ್ನಲ್ಲಿ ಅಪಘಾತಕ್ಕೆ ಈಡಾದ ಏರ್ ಇಂಡಿಯಾ ವಿಮಾನದ ಪೈಲಟ್, ಕ್ಯಾಪ್ಟನ್ ದೀಪಕ್ ಸಾಠೆ ಭಾರತೀಯ ವಾಯು ಪಡೆಯಲ್ಲಿ ಕೆಲಸ ಮಾಡಿದ್ದು, ಅವರಿಗೆ ಪ್ರತಿಷ್ಠಿತ ‘Sword of Honour’ ಗೌರವವೂ ಒಲಿದು ಬಂದಿದೆ. ಅವರ ಸಹೋದರ ಸಂಬಂಧಿ ನೀಲೇಶ್ ಸಾಠೆ ಈ ಸಂಬಂಧ ಅಗಲಿದ ಕ್ಯಾಪ್ಟನ್ಗೆ ಶ್ರದ್ಧಾಂಜಲಿ ಪತ್ರವೊಂದನ್ನು ಬರೆದಿದ್ದಾರೆ.
“ಅಲ್ಲಿ ಏನಾಯಿತು ಎಂದು ಹೀಗೆ ತಿಳಿದು ಬರುತ್ತದೆ. ಲ್ಯಾಂಡಿಂಗ್ ಗೇರ್ಗಳು ಕೆಲಸ ಮಾಡಲಿಲ್ಲ. ವಾಯುಪಡೆಯ ಮಾಜಿ ಪೈಲಟ್ ವಿಮಾನ ನಿಲ್ದಾಣದ ಸುತ್ತಲೂ ಮೂರು ರೌಂಡ್ ಹಾಕಿ, ವಿಮಾನದಲ್ಲಿದ್ದ ಇಂಧವನ್ನು ಖಾಲಿ ಮಾಡುವ ಮೂಲಕ ಅದಕ್ಕೆ ಬೆಂಕಿ ಹೊತ್ತಿಕೊಳ್ಳುವುದನ್ನು ತಪ್ಪಿಸಿದ್ದಾರೆ. ಆದ್ದರಿಂದ ಅಪಘಾತಗೊಂಡ ವಿಮಾನದಲ್ಲಿ ಹೊಗೆ ಆಡುತ್ತಿರಲಿಲ್ಲ. ಅಪ್ಪಳಿಸುವ ಮುನ್ನ ವಿಮಾನದ ಇಂಜಿನ್ ಅನ್ನು ಅವರು ಆಫ್ ಮಾಡಿದ್ದಾರೆ. ಮೂರು ಸುತ್ತಿನ ಬಳಿಕ ವಿಮಾನವನ್ನು ಲ್ಯಾಂಡ್ ಮಾಡಿ, ಅದರ ಬಲ ರೆಕ್ಕೆಗೆ ಹಾನಿಯಾಗಿದೆ. ತಾವು ಹುತಾತ್ಮರಾಗಿ, 180 ಸಹ ಪ್ರಯಾಣಿಕರ ಜೀವ ಉಳಿಸಿದ್ದಾರೆ” ಎಂದು ವಿವರಿಸಿದ್ದಾರೆ.
ವಾಯುಪಡೆಯಲ್ಲಿದ್ದ ವೇಳೆ, 90ರ ದಶಕದಲ್ಲಿ ಅಪಘಾತವೊಂದಕ್ಕೆ ಸಿಲುಕಿ ಬದುಕುಳಿದು ಬಂದಿದ್ದ ಸಾಠೆ, 6 ತಿಂಗಳ ಕಾಲ ತಲೆಗೆ ಆದ ಗಾಯಗಳಿಂದ ಚೇತರಿಕೆ ಕಂಡುಬಂದಿದ್ದರು. ಆದರೆ, ಅವರ ದೃಢ ಇಚ್ಛಾಶಕ್ತಿ ಹಾಗೂ ವಿಮಾನ ಹಾರಾಟದ ಮೇಲಿನ ಪ್ರೀತಿಯಿಂದ ಮತ್ತೆ ಕರ್ತವ್ಯಕ್ಕೆ ಹಾಜರಾಗುವ ಪರೀಕ್ಷೆಯಲ್ಲಿ ಪಾಸಾಗಿದ್ದರು. ವಂದೇ ಭಾರತ್ ಮಿಶನ್ ಭಾಗವಾಗಿ, ಕೊಲ್ಲಿ ದೇಶಗಳಿಗೆ ಹೋಗಿ ಸಹ ದೇಶವಾಸಿಗಳನ್ನು ಕರೆದುಕೊಂಡು ಬರುವ ಕೆಲಸ ಮಾಡುತ್ತಿರುವುದು ತಮಗೆ ಹೆಮ್ಮೆಯ ವಿಷಯವಾಗಿದೆ ಎಂದು ನೀಲೇಶ್ ಸಾಠೆ ಹೇಳಿಕೊಂಡಿದ್ದರು.
https://www.facebook.com/nilesh.sathe.94/posts/3163555300347207