alex Certify ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಐಐಟಿ ಪ್ರವೇಶಕ್ಕೆ ಮಾನದಂಡ ಸಡಿಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಐಐಟಿ ಪ್ರವೇಶಕ್ಕೆ ಮಾನದಂಡ ಸಡಿಲ

ನವದೆಹಲಿ: ಐಐಟಿ ಪ್ರವೇಶಕ್ಕೆ ಮಾನದಂಡಗಳನ್ನು ಸಡಿಲಿಸಲಾಗಿದೆ. 12 ನೇ ತರಗತಿಯಲ್ಲಿ ಕನಿಷ್ಠ ಶೇಕಡ 75 ರಷ್ಟು ಅಂಕ ಗಳಿಸಿರಬೇಕೆಂಬ ನಿಯಮಗಳನ್ನು ಸಡಿಲಿಸಲಾಗಿದೆ. ಸರಳವಾಗಿ ಪಾಸ್ ಆದವರು ಕೂಡ ಪ್ರವೇಶ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.

ಕೊರೋನಾ ಕಾರಣದಿಂದ ಈ ವರ್ಷ ಹಲವಾರು ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಹಾಗಾಗಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು ಈ ವರ್ಷ 12ನೇ ತರಗತಿಯ ಪ್ರವೇಶ ಅರ್ಹತಾ ಮಾನದಂಡಗಳನ್ನು ಸಡಿಲಗೊಳಿಸಲಿವೆ.

ಮಾನವ ಸಂಪನ್ಮೂಲ ಅಭಿವೃದ್ದಿ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಈ ಕುರಿತು ಮಾಹಿತಿ ನೀಡಿದ್ದು, ಐಐಟಿಗಳ ಜಂಟಿ ಪ್ರವೇಶ ಮಂಡಳಿ ಈ ಬಗ್ಗೆ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ. 12ನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ ಕನಿಷ್ಠ ಶೇಕಡ 75 ರಷ್ಟು ಅಂಕಗಳನ್ನು ಪರಿಗಣಿಸದೇ ಪಾಸ್ ಆದವರಿಗೂ ಪ್ರವೇಶ ಪರೀಕ್ಷೆ ಆಧರಿಸಿ ಐಐಟಿಗೆ ಪ್ರವೇಶ ನೀಡಲಾಗುವುದು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...