ಕೊರೊನಾ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗುತ್ತಿದ್ದು, ಈ ಬಹು ಉದ್ದೇಶಿತ ಮಾಸ್ಕ್ ಧರಿಸಿದರೆ ಅಂತಿಂಥಾ ಪ್ರಯೋಜನ ಇಲ್ಲ.
ಖಾನ್ ಪುರದ ಐಐಟಿ ಹಳೆ ವಿದ್ಯಾರ್ಥಿಗಳು ವಿಶೇಷ ಮಾಸ್ಕ್ ಒಂದನ್ನು ಆವಿಷ್ಕರಿಸಿದ್ದು, ಪ್ರಮುಖವಾಗಿ ವೈರಾಣು ನಿರೋಧಕವಾಗಿ ಮಾತ್ರವಲ್ಲದೆ, ದುರ್ವಾಸನೆರಹಿತ, ಬ್ಯಾಕ್ಟೀರಿಯಾ ನಿಗ್ರಹ, ಪ್ರದೂಷಣೆ ಮುಕ್ತವಾಗಿ ಕಾರ್ಯನಿರ್ವಹಿಸಬಲ್ಲದು.
ಹೊರಗಿನ ವಾತಾವರಣದಲ್ಲಿನ ದುರ್ವಾಸನೆ, ಧೂಳು ತಡೆಯುವುದರ ಜೊತೆಗೆ, ಬಾಯಿಯಿಂದ ಬರುವ ದುರ್ಗಂಧ, ಬ್ಯಾಕ್ಟೀರಿಯಾ ಸಹ ತಡೆಯುತ್ತದೆ.
ಡಾ. ಸಂದೀಪ್ ಪಾಟೀಲ್, ನಿತಿನ್ ಚರಾಟೆ, ಅಂಕಿತ್ ಶುಕ್ಲಾ ಮತ್ತು ಮಹೇಶ್ ಕುಮಾರ್ ಅವರನ್ನೊಳಗೊಂಡ ತಂಡ ಇದನ್ನು ಸಿದ್ಧಪಡಿಸಿದ್ದು, ಮುಖ್ಯವಾಗಿ ದುರ್ನಾತ ತಪ್ಪಿಸುವ ನಿಟ್ಟಿನಲ್ಲಿ ಬಹು ಉಪಯೋಗಿ ಮಾಸ್ಕ್ ಕಂಡುಹಿಡಿಯಲಾಗಿದೆ.
ಪ್ರಸ್ತುತ ಇದಿನ್ನೂ ಮಾರುಕಟ್ಟೆಗೆ ಬಂದಿಲ್ಲ. ಎನ್ – 95 ಮಾಸ್ಕ್ ಗಿಂತ ಕೊಂಚ ದುಬಾರಿ ಆಗಬಹುದು. ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಂಡದ ನಾಯಕ ಡಾ. ಸಂದೀಪ್ ಪಾಟೀಲ್ ಹೇಳಿದ್ದಾರೆ.