
ಇಂದೋರ್ ನ ಭಾರತೀಯ ತಾಂತ್ರಿಕ ವಿಶ್ವವಿದ್ಯಾಲಯವು ಗಣಿತ ಹಾಗೂ ವೈಜ್ಞಾನಿಕ ಜ್ಞಾನಾರ್ಜನೆಗೆಂದು ವಿಶಿಷ್ಟವಾದ ಹೆಜ್ಜೆಯೊಂದನ್ನು ಇಟ್ಟಿದೆ. ಸಂಸ್ಕೃತದ ಪುರಾತನ ಲಿಪಿಗಳ ಅಧ್ಯಯನಕ್ಕೆ IIT-I ಚಾಲನೆ ಕೊಟ್ಟಿದೆ.
“Understanding Classical Scientific Texts of India in an Immersive Sanskrit Environment” ಹೆಸರಿನ ಈ ಕೋರ್ಸ್ ಅನ್ನು ಪುರಾತನ ಜ್ಞಾನದೊಂದಿಗೆ ಇಂದಿನ ತಲೆಮಾರಿಗೆ ತಲುಪಿಸುವ ಉದ್ದೇಶದಿಂದ ಆರಂಭಗೊಂಡಿದೆ.
ಈ ಕಾರ್ಯಕ್ರಮಕ್ಕೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ (AICTE) ಪ್ರಯೋಜಕತ್ವವಿದ್ದು, ಆಗಸ್ಟ್ 22ರಿಂದ ಅಕ್ಟೋಬರ್ 2ರ ವರೆಗೂ, ಒಟ್ಟಾರೆ 62 ಗಂಟೆಗಳ ಮಟ್ಟಿಗೆ ಆನ್ಲೈನ್ ಕ್ಲಾಸ್‌ಗಳು ಜರುಗಲಿವೆ.
ಈ ಕಾರ್ಯಕ್ರಮವನ್ನು ಎರಡು ಹಂತಗಳಲ್ಲಿ ಇಟ್ಟುಕೊಳ್ಳಲಾಗಿದೆ. ಮೊದಲ ಹಂತದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷೆಯ ಮೂಲ ಜ್ಞಾನ ಹೇಳಿಕೊಟ್ಟು, ಬಳಿಕ ಇದೇ ಭಾಷೆಯಲ್ಲಿರುವ ಕ್ಲಾಸಿಕಲ್ ಗಣಿತದ ಪರಿಚಯ ಮಾಡಿಕೊಡಲಾಗುವುದು.