ಕೊರೊನಾ ಹೆಮ್ಮಾರಿಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸೋಂಕಿತರನ್ನು ಪತ್ತೆ ಹಚ್ಚುವುದು ದೊಡ ತಲೆನೋವಾಗಿದೆ. ಒಂದು ದಿನಕ್ಕೆ ಸಾವಿರಾರು ಮಂದಿಯ ಟೆಸ್ಟ್ ನಡೆಯುತ್ತಲೇ ಇದೆ. ಅತ್ತ ಖಾಸಗಿ ಲ್ಯಾಬ್ ಗಳಲ್ಲೂ ಹಣ ನೀಡಿ ಟೆಸ್ಟ್ ಮಾಡಿಸುತ್ತಿದ್ದಾರೆ. ಹೀಗಾಗಿ ಕಡಿಮೆ ಖರ್ಚಿನಲ್ಲಿ ಟೆಸ್ಟ್ ಮಾಡುವ ಕಿಟ್ ಒಂದನ್ನು ದೆಹಲಿ ಇನ್ಸ್‌ಟ್ಯುಟ್ಯೂಷನ್ ಆಫ್ ಟೆಕ್ನಾಲಜಿ ಆವಿಷ್ಕಾರ ಮಾಡಿದೆ.
ಹೌದು, ಕೊರೊನಾ ಡಯೋಗ್ನೋಸ್ಟಿಕ್ ಕಿಟ್ ಆದ ಕೊರೋಶ್ಯೂರ್‌ನ ಆವಿಷ್ಕರಿಸಿದ್ದು, ಬಿಡುಗಡೆ ಮಾಡಲಾಗಿದೆ. ಈ ಕಿಟ್‌ನ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಬಿಡುಗಡೆ ಮಾಡಿದ್ದು, ಕಡಿಮೆ ದರದ ಈ ಕಿಟ್ ಆವಿಷ್ಕಾರದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಕಿಟ್‌ನ ಬೆಲೆ ಕೇವಲ 399 ರೂಪಾಯಿಗಳು ಮಾತ್ರ. ಆರ್‌ಎನ್‌ಎ ಐಸೋಲೇಷನ್ ಹಾಗೂ ಲ್ಯಾಬೊರೇಟರಿ ಚಾರ್ಜ್ ಸೇರಿದಂತೆ ಎಲ್ಲಾ ಖರ್ಚು ಸೇರಿದರೂ 650 ರೂಪಾಯಿಗಳು ಇದಕ್ಕೆ ತಗುಲುತ್ತದೆ. ಸದ್ಯ ಈ ಕಿಟ್‌ಗೆ ಐಸಿಎಂಆರ್‌ನಿಂದಲೂ ಅಂಗೀಕಾರ ಸಿಕ್ಕಿದೆ.