alex Certify ಗಂಗೆ ಶುದ್ಧಿಗೆ ಐಐಟಿ-ಹಿಂದೂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಗೆ ಶುದ್ಧಿಗೆ ಐಐಟಿ-ಹಿಂದೂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ

Image result for IIT-BHU Researchers Invent Eco-Friendly 'Adsorbent' From Rice Husk That Can Help Clean Ganga

ತ್ಯಾಜ್ಯ ನೀರಿನಲ್ಲಿರುವ ವಿಷಯುಕ್ತವಾದ ಭಾರೀ ಲೋಹದ ಕಣಗಳನ್ನು ಹೀರಿಕೊಳ್ಳಬಲ್ಲ ಪರಿಸರ ಸ್ನೇಹಿ ’ಹೀರಕ’ (ಅಬ್ಸರ್ಬೆಂಟ್‌) ಒಂದನ್ನು ಐಐಟಿ-ಬನಾರಸ್ ಹಿಂದೂ ವಿವಿಯ ಜೀವರಾಸಾಯನಿಕ ಇಂಜಿನಿಯರಿಂಗ್ ವಿಭಾಗದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಹೆಕ್ಸಾವೇಲೆಂಟ್ ಕ್ರೋಮಿಯಂನಂಥ ವಿಷಯುಕ್ತ ಮಾಲಿನ್ಯಕಾರಕಗಳನ್ನು ನೀರಿನಿಂದ ತೆಗೆದುಹಾಕಲು ಈ ಪರಿಸರ ಸ್ನೇಹಿ ಉತ್ಪನ್ನವನ್ನು ಭತ್ತದ ಹೊಟ್ಟಿನಿಂದ ಉತ್ಪಾದಿಸಲಾಗಿದೆ. ಈ ಮೂಲಕ ಗಂಗಾ ನದಿಯನ್ನು ಸ್ವಚ್ಛಗೊಳಿಸಲು ಆವಿಷ್ಕಾರಿ ಐಡಿಯಾವೊಂದು ಚಿಗುರಿದೆ.

ಗ್ರಾಮೀಣ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಮರಳು ಉಚಿತ

ಡಾ. ವಿಶಾಲ್ ಮೆಹ್ರಾ ಹಾಗೂ ಅವರ ಪಿಎಚ್‌ಡಿ ವಿದ್ಯಾರ್ಥಿಗಳಾದ ವೀರ್‌ ಸಿಂಗ್ ಹಾಗೂ ಜ್ಯೋತಿ ಸಿಂಗ್ ಈ ಹೀರಕವನ್ನು ಅಭಿವೃದ್ಧಿಪಡಿಸಿದ್ದು, ಹೆಕ್ಸಾವೇಲೆಂಟ್ ಕ್ರೋಮಿಯಂನ ಮಟ್ಟವನ್ನು ತಗ್ಗಿಸುವಲ್ಲಿ ಇದು ಬಹಳಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ ಕೆಲಸವನ್ನು ’ಜರ್ನಲ್ ಆಫ್ ಎನ್ವಿರಾನ್ಮೆಂಟ್‌ ಕೆಮಿಕಲ್ ಇಂಜಿನಿಯರಿಂಗ್’ ಎಂಬ ನಿಯಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...